ಬೆಂಗಳೂರು: ಕ್ಷತ್ರಿಯ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ರಾಜ್ಯ ಕ್ಷತ್ರಿಯ ಸಂಘ ಕಾಲ್ನಡಿಗೆ ಜಾಥಾ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿತು. ನಿಯೋಗದ ಬದಲು ರ‍್ಯಾಲಿಯಂತೆ ಬಂದ ಸಂಘದ ಸದಸ್ಯರನ್ನು ಪೊಲೀಸರು ತಡೆದರು.
ಕ್ಷತ್ರಿಯ ನಿಗಮ ಸ್ಥಾಪನೆಗೆ ಒತ್ತಾಯಿಸಿ ಸಿಎಂಗೆ ಮನವಿ - ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸುದ್ದಿ
ಈ ಹಿಂದೆ ಅಮಿತ್ ಶಾ ರಾಜ್ಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಘೋಷಣೆ ಮಾಡಿದ್ದಂತೆ ನಮಗೆ ನಿಗಮ ಸ್ಥಾಪಿಸಿ ಎಂದು ಸಿಎಂ ಯಡಿಯೂರಪ್ಪರಿಗೆ ಮನವಿ ಸಲ್ಲಿಸಿದರು..
ಕ್ಷತ್ರಿಯ ನಿಗಮ ಸ್ಥಾಪನೆಗೆ ಒತ್ತಾಯ
ಕ್ಷತ್ರಿಯ ಸಮುದಾಯಕ್ಕೆ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ಕಾಲ್ನಡಿಗೆ ಮೂಲಕ ಸಿಎಂ ನಿವಾಸಕ್ಕ ಬಂದ ರಾಜ್ಯ ಕ್ಷತ್ರಿಯ ಸಂಘದ ಮುಖಂಡರು ಗುಂಪುಗೂಡಿ ದಂಡಿನಂತೆ ಬಂದಿದ್ದರು. ಆದರೆ, ಕಾವೇರಿ ನಿವಾಸದ ಒಳಗೆ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದಿದ್ದಾರೆ.
ಬಳಿಕ ಅವರ ಮನವೊಲಿಸಿದ ಪೊಲೀಸರು, ಈ ರೀತಿ ಬಾರದೆ, ಒಂದಿಬ್ಬರು ಬಂದು ಸಿಎಂಗೆ ಮನವಿ ಪತ್ರ ಸಲ್ಲಿಸುವಂತೆ ತಿಳಿಸಿದರು. ಈ ಹಿಂದೆ ಅಮಿತ್ ಶಾ ರಾಜ್ಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಘೋಷಣೆ ಮಾಡಿದ್ದಂತೆ ನಮಗೆ ನಿಗಮ ಸ್ಥಾಪಿಸಿ ಎಂದು ಸಿಎಂ ಯಡಿಯೂರಪ್ಪರಿಗೆ ಮನವಿ ಸಲ್ಲಿಸಿದರು.