ಕರ್ನಾಟಕ

karnataka

ETV Bharat / state

ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಅಧಿಕೃತವಾಗಿ ರಾಜ್ಯ ಸರ್ಕಾರದಿಂದ ಅಧಿಸೂಚನೆ - ಮೋಟಾರು ವಾಹನ ಕಾಯ್ದೆ

ಮೋಟಾರು ವಾಹನ ಕಾಯ್ದೆಯನ್ವಯ ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿವಿಧ ರೀತಿಯಲ್ಲಿ ದಂಡ ವಿಧಿಸಲು ಅನುಮೋದನೆ ದೊರೆತಿದೆ. ಇದೀಗ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಬಿದ್ದಿದೆ.

New Traffic Rules

By

Published : Sep 4, 2019, 4:58 AM IST

ಬೆಂಗಳೂರು:ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರ ಜಾರಿಮಾಡಿದೆ.

ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರ ರ ಮೇಲೆ ಟ್ರಾಫಿಕ್ ಪೊಲೀಸರು ಕಣ್ಣಿಟ್ಟು ಇಂದಿನಿಂದ ಎಲ್ಲೆಡೆ ಫೈನ್ ಹಾಕಲಿದ್ದಾರೆ. ಇತ್ತೀಚೆಗಷ್ಟೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿದ ಬೆನ್ನಲೇ ಕರ್ನಾಟಕ ಮೋಟಾರ್ ವಾಹನ ಕಾಯ್ದೆಯಲ್ಲೂ ತಿದ್ದುಪಡಿ ಮಾಡಿ ಜಾರಿ ಮಾಡಲಾಗಿತ್ತು. ಸೆ.3ರಿಂದಲೇ ಹೊಸ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿರುವ ಬಗ್ಗೆ‌ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವೀಕಾಂತೆಗೌಡ ತಿಳಿಸಿದರು.

ಹೊಸ ಟ್ರಾಫಿಕ್ ರೂಲ್ಸ್
ಹೊಸ ಟ್ರಾಫಿಕ್ ರೂಲ್ಸ್
ಹೊಸ ಟ್ರಾಫಿಕ್ ರೂಲ್ಸ್

ಹೊಸ ನಿಯಮದ ಪ್ರಕಾರ ಯಾವುದಕ್ಕೆ ಎಷ್ಟು ದಂಡ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

  • ಮಿತಿ ಮೀರಿದ ವೇಗದ ಚಾಲನೆಗೆ 500 ರೂ.ಯಿಂದ 1 ಸಾವಿರ ರೂ. ದಂಡ
  • ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ 1 ಸಾವಿರ ರೂ. ದಂಡ
  • ಚಾಲನೆ ವೇಳೆ 2ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿಬಿದ್ದರೆ 2 ಸಾವಿರ ರೂ. ದಂಡ
  • ನೊಂದಣಿ ಇಲ್ಲದೆ ವಾಹನ ಚಲಾವಣೆ ಮಾಡಿದರೆ ಮೊದಲ ಬಾರಿಗೆ 5 ಸಾವಿರ ರೂ. ದಂಡ. ನೊಂದಣಿ ಇಲ್ಲದೆ ಚಲಾಯಿಸಿ 2 ಬಾರಿ ಸಿಕ್ಕಿಬಿದ್ದರೆ 10 ಸಾವಿರ ರೂ.
  • ಇನ್ಷೂರೆನ್ಸ್, DL ಇಲ್ಲದೆ ಚಾಲನೆ ಮಾಡಿದರೆ 1 ಸಾವಿರ ರೂ.
  • ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದ ವಾಹನ ಚಲಾಯಿಸಿದರೆ 2 ಸಾವಿರ ರೂ.
  • ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದೆ 2ನೇ ಬಾರಿ ಚಲಾಯಿಸಿದರೆ 5 ಸಾವಿರ ರೂ.
  • ಬಸ್​ನಲ್ಲಿ ಚಿಲ್ಲರೆ ಹಿಂದಿರುಗಿಸದಿದ್ದರೆ ಕಂಡಕ್ಟರ್​ಗೆ 500 ರೂ. ದಂಡ
  • ಅವಧಿ ಮೀರಿದ ಟಿಕೆಟ್ ನೀಡಿದರೆ ಕಂಡಕ್ಟರ್​ಗೆ 500 ರೂ. ದಂಡ
  • ಪ್ರಯಾಣದ ದೂರಕ್ಕೆ ತಕ್ಕಂತೆ ಟಿಕೆಟ್ ನೀಡದಿದ್ದರೆ ಕಂಡಕ್ಟರ್​​ಗೆ 500 ರೂ. ದಂಡ.

ಈ ನಿಯಮದಡಿ ಈಗಾಗಲೆ ಟ್ರಾಫಿಕ್ ಪೊಲಿಸರು ಅಧಿಕೃತವಾಗಿ ದಂಢ ವಿಧಿಸುತ್ತಿದ್ದು, ವಾಹನ ಸವಾರರು ರೂಲ್ಸ್​ ಬ್ರೇಕ್​ ಮಾಡಿದ್ದಲ್ಲಿ ಜೇಬಿಗೆ ಕತ್ತರಿ ಹಾಕುತ್ತಿದ್ದು, ಈಗಾಗಲೇ ರಾಜ್ಯದ ಕೆಲವಡೆ ದಂಡ ತೆತ್ತಿದ್ದಾರೆ.

ABOUT THE AUTHOR

...view details