ಕರ್ನಾಟಕ

karnataka

By

Published : Nov 5, 2022, 9:37 PM IST

ETV Bharat / state

ವಿಧಾನ ಮಂಡಲದಲ್ಲಿ ನೀಡಲಾಗುವ ಭರವಸೆ ಕಾಲಮಿತಿಯೊಳಗೆ ಅನುಷ್ಠಾನ: ಸಿಎಸ್

ವಿಧಾನ ಮಂಡಲದಲ್ಲಿ ಕಲಾಪ ನಡೆಯುವ ಸಂದರ್ಭದಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದಂತೆ ಸಚಿವರುಗಳು ನೀಡುವ ಉತ್ತರದಿಂದ ಉದ್ಭವಿಸುವ ಭರವಸೆಗಳ ಅನುಷ್ಠಾನಕ್ಕಾಗಿ ತುರ್ತು ಅನುಪಾಲನಾ ಕ್ರಮವನ್ನು ವಹಿಸುವಂತೆ ವಂದಿತಾ ಶರ್ಮಾ ಸೂಚಿಸಿದ್ದಾರೆ.

implementation-within-the-time-frame-of-promises-made-in-legislative
ವಿಧಾನ ಮಂಡಲದಲ್ಲಿ ನೀಡಲಾಗುವ ಭರವಸೆ ಕಾಲಮಿತಿಯೊಳಗೆ ಅನುಷ್ಠಾನ: ಸಿಎಸ್

ಬೆಂಗಳೂರು:ವಿಧಾನ ಮಂಡಲದಲ್ಲಿ ನೀಡಲಾಗುವ ಭರವಸೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಅನುಪಾಲನಾ ಕ್ರಮ ವಹಿಸುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚನೆ ನೀಡಿದ್ದಾರೆ.

ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರು ಅ. 28ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಸದನ ನಡೆಯುವಾಗ ಹಾಜರಿರುವ ಇಲಾಖಾ ಅಧಿಕಾರಿಗಳು, ಸಚಿವರುಗಳು ನೀಡುವ ಭರವಸೆಗಳ ಅನುಷ್ಠಾನಕ್ಕಾಗಿ ತ್ವರಿತ ಕ್ರಮ ವಹಿಸಬೇಕಾಗಿರುತ್ತದೆ. ಈ ಬಗ್ಗೆ ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಸೂಕ್ತ ಸೂಚನೆ ನೀಡಿ, ಭರವಸೆ ಸಮಿತಿ ಸಭೆಯಲ್ಲಿ ವಿನಾಕಾರಣ ಚರ್ಚೆಗೆ ಆಸ್ಪದ ನೀಡದೇ, ಭರವಸೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅನುಪಾಲನೆ ಮಾಡುವಂತೆ ತಿಳಿಸಲು ಕೋರಿದ್ದರು.

ಈ ಹಿನ್ನೆಲೆಯಲ್ಲಿ ವಿಧಾನ ಮಂಡಲ ಕಲಾಪ ನಡೆಯುವ ಸಂದರ್ಭದಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದಂತೆ ಸಚಿವರುಗಳು ನೀಡುವ ಉತ್ತರದಿಂದ ಉದ್ಭವಿಸುವ ಭರವಸೆಗಳ ಅನುಷ್ಠಾನಕ್ಕಾಗಿ ತುರ್ತು ಅನುಪಾಲನಾ ಕ್ರಮವನ್ನು ವಹಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ:ವ್ಯಾಜ್ಯಗಳ ಪರಿಹಾರಕ್ಕಾಗಿ ಮಧ್ಯಸ್ಥಿಕೆ ಕೇಂದ್ರ ಸ್ಥಾಪನೆಗೆ ಸರ್ಕಾರ ಸಿದ್ಧ: ಸಿಎಂ ಬೊಮ್ಮಾಯಿ

ABOUT THE AUTHOR

...view details