ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ: ಆಟೋ ಚಾಲಕನಿಂದ ಹಾಡಹಗಲೇ ಮಹಿಳೆಯ ಬರ್ಬರ ಕೊಲೆ - Bangaluru crime

ಹಾಡಹಗಲೇ ಮಚ್ಚಿನಿಂದ ಹಲ್ಲೆ ಮಾಡಿ ಪರಿಚಿತ ಮಹಿಳೆಯೋರ್ವಳನ್ನ ಆಟೋ ಚಾಲಕ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ.

ಸಾವಿಗೀಡಾದ ಮಹಿಳೆ

By

Published : Sep 6, 2019, 2:47 AM IST

ಬೆಂಗಳೂರು:ಅನೈತಿಕ ಸಂಬಂಧದಿಂದಾಗಿ ಮಹಿಳೆಯೊರ್ವಳನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ.

35 ವರ್ಷದ ಗೀತಾ ಮೃತಪಟ್ಟ ಮಹಿಳೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯ ಶ್ರೀನಿವಾಸ ನಗರದಲ್ಲಿ ಗೀತಾ ಎಂಬಾಕೆ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದಳು. ಪಕ್ಕದಲ್ಲೇ ವಾಸ ಮಾಡಿದ್ದ ಆಟೋ ಚಾಲಕ ಶೇಖರ್ ಜತೆ ಆಕೆ ಸಲುಗೆ ಬೆಳೆಸಿದ್ದಳು. ಆದರೆ, ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು ಪದೇ ಪದೇ ಜಗಳವಾಗುತ್ತಿತ್ತು.

ಡಿ.ಸಿ.ಪಿ ರಮೇಶ್​​

ಗುರುವಾರ ಬೆಳಗ್ಗೆ ಶೇಖರ್, ಗೀತಾಳನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದು, ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಶೇಖರ್ ಕೋಪಗೊಂಡು ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಆಕೆಯನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.

ಸದ್ಯ ಕಾಮಾಕ್ಷಿ ಪಾಳ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details