ಕರ್ನಾಟಕ

karnataka

ETV Bharat / state

ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.. ರೆಡ್​ ಅಲರ್ಟ್​ ಘೋಷಣೆ - ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ ಐಎಂಡಿ

ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು IMD ನೀಡಿದೆ. ಆ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ರೆ, ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್​ ಘೋಷಣೆ ಮಾಡಲಾಗಿದೆ.

ಮಳೆ
ಮಳೆ

By

Published : May 18, 2022, 6:13 PM IST

ಬೆಂಗಳೂರು: ಮಂಗಳವಾರ ಸಿಲಿಕಾನ್​ ಸಿಟಿಯಲ್ಲಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಈ ಮಳೆಗೆ ರಾಜ್ಯ ರಾಜಧಾನಿ ತತ್ತರಿಸಿ ಹೋಗಿದೆ. ಇದೀಗ ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು IMD(ಭಾರತೀಯ ಹವಾಮಾನ ಇಲಾಖೆ) ನೀಡಿದೆ.‌ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ರೆ, ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಹಾಗೂ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.‌

ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ ಐಎಂಡಿ

ರೆಡ್ ಅಲರ್ಟ್ ಘೋಷಣೆಯಾದ ಜಿಲ್ಲೆಗಳು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ.

ಆರೆಂಜ್ ಅಲರ್ಟ್ ಘೋಷಣೆಯಾದ ಜಿಲ್ಲೆಗಳು: ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ.

ಯೆಲ್ಲೋ ಅಲರ್ಟ್ ಘೋಷಣೆಯಾದ ಜಿಲ್ಲೆಗಳು:ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು.

ಇದನ್ನೂ ಓದಿ:ಒಂದೇ ಮಳೆಗೆ ತತ್ತರಿಸಿದ ಬೆಂಗಳೂರು ಜನ: ಟ್ಯಾಕ್ಸ್ ಕಟ್ಟೋದು ಈ ರೀತಿ ಕಷ್ಟ ಪಡೋದಕ್ಕಾ ಎಂದು ಆಕ್ರೋಶ

ರೆಡ್ ಅಲರ್ಟ್​ನಲ್ಲಿ 204 mm ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದರೆ, ಆರೆಂಜ್ ಅಲರ್ಟ್ ನಲ್ಲಿ 115 mm ರಿಂದ 204 mm ಮಳೆಯ ಆಗಲಿದೆ. ಯೆಲ್ಲೋ ಅಲರ್ಟ್​ನಲ್ಲಿ 64.5 mm ಯಿಂದ 115.5 mm ಮಳೆಯಾಗಲಿದೆ. ರಾಜಧಾನಿಯಲ್ಲಿ 90mm ಮಳೆಯಾದರೆ ಜನಜೀವನ ಅಸ್ತವ್ಯಸ್ತವಾಗುತ್ತೆ, ಹೀಗಿರುವಾಗ ನಿನ್ನೆ ಹಲವು ಭಾಗದಲ್ಲಿ 100mm ಗೂ ಹೆಚ್ಚು ಮಳೆಯಾಗಿದೆ.

ABOUT THE AUTHOR

...view details