ಬೆಂಗಳೂರು:ಐಎಂಎ ಹಗರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅಂದರ್ ಆಗಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಹೀಗಾಗಿ ಕಳೆದೆರಡು ರಾತ್ರಿ ರೋಷನ್ ಬೇಗ್ ಜೈಲಿನ ಕ್ವಾರಂಟೈನ್ ಬ್ಯಾರಕ್ನಲ್ಲಿ ಸಾದಾ ಕೈದಿ ಹಾಗೆ ಜೀವನ ಕಳೆದಿದ್ದು, ಸದ್ಯ ಅನಾರೋಗ್ಯ ಸಮಸ್ಯೆ ಹಿನ್ನೆಲೆ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ ಎರಡು ರಾತ್ರಿ ಕಳೆದ ಬೇಗ್: ಇಂದು ಜಾಮೀನು ಅರ್ಜಿ ವಿಚಾರಣೆ - ಪರಪ್ಪನ ಅಗ್ರಹಾರದಲ್ಲಿ ಎರಡು ದಿನ ಕಳೆದ ರೋಷನ್ ಬೇಗ್
ಐಎಂಎ ಬಹುಕೋಟಿ ಹಗರಣದಲ್ಲಿ ಈಗಾಗಲೇ ರೋಷನ್ ಬೇಗ್ ಜೈಲು ಸೇರಿ ಎರಡು ದಿನ ಕಳೆದಿದ್ದಾರೆ. ಇಂದು ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ವಕೀಲರು ರೋಷನ್ ಅನಾರೋಗ್ಯವನ್ನು ಮುಂದಿಟ್ಟುಕೊಂಡು ಬೇಲ್ ಕೊಡಿಸುವ ತಯಾರಿಯಲ್ಲಿದ್ದಾರೆ.
ಇಂದು ಜಾಮೀನು ಅರ್ಜಿ ವಿಚಾರಣೆ
ಹೃದಯ ಸಂಬಂಧಿ ಕಾಯಿಲೆ ಇರುವ ಹಿನ್ನೆಲೆ ಹಾರ್ಟ್ ಅಂಜಿಯೋಗ್ರಾಮ್ ಚಿಕಿತ್ಸೆಗೆ ಈಗಾಗಲೇ ಒಳಪಟ್ಟಿದ್ರು. ಹಾಗೆ ಜೈಲಿನ ಆಹಾರದಿಂದ ಆರೋಗ್ಯದಲ್ಲಿ ಅನಾರೋಗ್ಯ ಕಂಡು ಬಂದ ಕಾರಣ ಸದ್ಯ ಜೈಲಾಧಿಕಾರಿಗಳು ಬಹಳ ಸೂಕ್ಷ್ಮವಾಗಿ ರೋಷನ್ ಬೇಗ್ ಮೇಲೆ ನಿಗಾ ಇಟ್ಟಿದ್ದಾರೆ. ಮತ್ತೊಂದೆಡೆ ರೋಷನ್ ಬೇಗ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ನ್ಯಾಯಾಲಯದಲ್ಲಿ ವಕೀಲರು ರೋಷನ್ ಬೇಗ್ ಆರೋಗ್ಯದ ದಾಖಲಾತಿ ಮತ್ತು ಅವರ ಸದ್ಯದ ಆರೋಗ್ಯ ಪರಿಸ್ಥಿತಿ ಬಗ್ಗೆ ಹೇಳಿ ಜಾಮೀನು ಕೊಡಿಸುವ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ.