ಬೆಂಗಳೂರು: ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಇನ್ಸ್ಪೆಕ್ಟರ್ಗಳಿಗೆ ಕಂಟಕ ಎದುರಾಗಿದೆ. ಸದ್ಯ ಐಎಂಎ ಪ್ರಕರಣದಲ್ಲಿ ಐವರು ಪೊಲೀಸ್ ಅಧಿಕಾರಿಗಳ ವಿರುದ್ದ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.
ಇನ್ಸ್ಪೆಕ್ಟರ್ ರಮೇಶ್ ಮೊದಲನೇ ಆರೋಪಿಯಾದ್ರೆ, ಎರಡನೇಯದಾಗಿ ಅಜಯ್ ಹಿಲೋರಿ , ಮೂರನೇ ಆರೋಪಿ ಪಿಎಸ್ಐ ಗೌರಿಶಂಕರ್, ನಾಲ್ಕನೆಯದಾಗಿ ಸಿಐಡಿ ಡಿಎಸ್ಪಿ ಇ.ಬಿ ಶ್ರೀಧರ್, ಐದನೆಯದಾಗಿ ಹೇಮಂತ್ ನಿಂಬಾಳ್ಕರ್ ಅವರ ಮೇಲೆ ಎಫ್ಐಆರ್ ದಾಖಲಿಸಿದೆ.
ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 5 ಮಂದಿ ವಿರುದ್ದ ಸಿಬಿಐ FIR ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಎಸ್ಐಟಿ ತನಿಖೆ ನಡೆಸಿ ನಂತರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಹಸ್ತಾಂತರ ಮಾಡಿತ್ತು. ಹೀಗಾಗಿ ಸಿಬಿಐ ತನಿಖೆ ನಡೆಸಿದಾಗ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಪಾತ್ರ ಕಂಡು ಬಂದ ಹಿನ್ನೆಲೆ ಎಫ್ಐಆರ್ ದಾಖಲು ಮಾಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಅನುಮತಿಯನ್ನ ಸಿಬಿಐ ಕೇಳಿದ್ದು, ಸದ್ಯ ಸರ್ಕಾರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬಳಿಕ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ FIR ದಾಖಲು ಮಾಡಿದೆ.
ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 5 ಮಂದಿ ವಿರುದ್ದ ಸಿಬಿಐ FIR ಬಹುಕೋಟಿ ವಂಚನೆ ಪ್ರಕರಣದಲ್ಲಿ ಮನ್ಸೂರ್ ಖಾನ್ ಸದ್ಯ ಬಂಧಿತವಾಗಿದ್ದು, ಈತ ತನಿಖಾಧಿಕಾರಿಗಳ ಎದುರು ಪೊಲೀಸರ ಪಾತ್ರದ ಕುರಿತು ಕೆಲ ವಿಚಾರಗಳನ್ನ ಬಾಯಿ ಬಿಟ್ಟಿದ್ದ.