ಕರ್ನಾಟಕ

karnataka

ETV Bharat / state

ಐಎಂಎ ಬಹುಕೋಟಿ ವಂಚನೆ ಪ್ರಕರಣ: ರೋಷನ್ ಬೇಗ್ ನಂತರ ಜಮೀರ್​ಗೆ ಕಾದಿದ್ಯಾ ಸಂಕಷ್ಟ..?

ಐಎಂಎ ಬಹುಕೋಟಿ ವಂಚನೆ ಪ್ರಕರಣದಡಿ ಸದ್ಯ ಮನ್ಸೂರ್​ನನ್ನ ಮತ್ತೆ ಕಸ್ಟಡಿಗೆ ಪಡೆದುಕೊಂಡಿರುವ ಸಿಬಿಐ, ಆತನಿಂದ ಯಾರಿಗೆಲ್ಲ ಹಣ ವರ್ಗಾವಣೆ ಆಗಿದೆ ಅನ್ನೋ ಕುರಿತು ಮಾಹಿತಿ ಕಲೆಹಾಕ್ತಿದ್ದಾರೆ.

IMA multi-crore scam Case News
ಐಎಂಎ ಬಹುಕೋಟಿ ವಂಚನೆ ಪ್ರಕರಣ

By

Published : Nov 24, 2020, 3:34 PM IST

ಬೆಂಗಳೂರು:ಐಎಂಎ ವಂಚನೆ ಪ್ರಕರಣದಲ್ಲಿ ಸದ್ಯ ಮಾಜಿ ಸಚಿವ ರೋಷನ್​ಬೇಗ್ ಅಂದರ್ ಬಳಿಕ ಬಹಳಷ್ಟು ಮಂದಿಗೆ ಎದೆಯಲ್ಲಿ ಡವ ಡವ ಶುರುವಾಗಿದೆ.

ಸದ್ಯ ಸಿಬಿಐ ಮನ್ಸೂರ್​ನಿಂದ ಹಣ ವರ್ಗಾವಣೆ ಆದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಐಎಂಎ ಪ್ರಕರಣ ಶಾಸಕ ಜಮೀರ್​ಗೆ​ ಕೂಡ ಅಂಟಿಕೊಳ್ಳುವ ಲಕ್ಷಣ ಕಾಣುತ್ತಿದೆ. ಈ ಹಿಂದೆ ಜಮೀರ್ 2018 ರ ಚುನಾವಣಾ ಸಂದರ್ಭದಲ್ಲಿ ಆಸ್ತಿ ವಿವರ ಸಲ್ಲಿಸಿ, ಅದರಲ್ಲಿ ಆಸ್ತಿ ವಿವರ ನಮೂದು ಮಾಡಿದ್ದರು. ಅಲ್ಲದೇ ಮನ್ಸೂರ್ ಖಾನ್ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಸದ್ಯ ಮನ್ಸೂರ್​ನನ್ನ ಮತ್ತೆ ಕಸ್ಟಡಿಗೆ ಪಡೆದುಕೊಂಡಿರುವ ಸಿಬಿಐ ಆತನಿಂದ ಯಾರಿಗೆಲ್ಲ ಹಣ ವರ್ಗಾವಣೆ ಆಗಿದೆ ಅನ್ನೋ ಕುರಿತು ಮಾಹಿತಿ ಕಲೆಹಾಕ್ತಿದ್ದಾರೆ. ಜಮೀರ್ ಹೆಸರನ್ನ ಮನ್ಸೂರ್ ಬಾಯ್ಬಿಟ್ಟರೆ, ಜಮೀರ್ ಅಹ್ಮದ್ ಖಾನ್​ಗೂ ಸಂಕಷ್ಟ ತಪ್ಪಿದ್ದಲ್ಲ ಎನ್ನಲಾಗಿದೆ.

ಐಎಂಎ ಬಹುಕೋಟಿ ಹಗರಣ ಸಂಬಂಧ ಮೊದಲು ಸಿಸಿಬಿ ತನಿಖೆ ನಡೆಸಿ ನಂತರ ಎಸ್ಐಟಿಗೆ ಕೇಸ್ ವರ್ಗಾಯಿಸಲಾಗಿತ್ತು. ಸ್ಪೆಷಲ್ ಇನ್ವೆಸ್ಟಿಗೇಟಿವ್ ಟೀಂ ನಿಂದ ತನಿಖೆ ನಡೆಯುತ್ತಿದ್ದ ವೇಳೆ ಜಮೀರ್​ಗೂ ನೋಟಿಸ್ ಕೊಟ್ಟು ಮಾಹಿತಿ ನೀಡಲು ತಿಳಿಸಿತ್ತು. ಎಸ್​ಐಟಿ ನಂತರ ಇಡಿ ಯಿಂದಲೂ ಜಮೀರ್​ಗೆ ಸಮನ್ಸ್ ಬಂದಿತ್ತು. ಸದ್ಯ ಜಮೀರ್ ಆತಂಕದಲ್ಲಿದ್ದು, ಈ ಹಿಂದೆ ಮಾಧ್ಯಮಗಳ ಜತೆ ಮಾತಾಡಿ ಸಿಬಿಐ ನೋಟಿಸ್ ನೀಡಿದ್ರೂ ಸಮಸ್ಯೆಯಿಲ್ಲ. ಯಾಕಂದ್ರೆ ರಿಚ್ಮಂಡ್‌ ಟೌನ್‌ನ ಸರ್ಪಂಟೈನ್‌ ರಸ್ತೆಯಲ್ಲಿರುವ ನಿವೇಶನವೊಂದನ್ನು ಮನ್ಸೂರ್‌ ಖಾನ್‌ಗೆ 2017ರ ಡಿಸೆಂಬರ್‌ನಲ್ಲಿ ಮಾರಾಟ ಮಾಡಿದ್ದೆ. ಈ ವ್ಯವಹಾರ ಅತ್ಯಂತ ಪಾರದಶರ್ಕವಾಗಿದೆ. ಆರ್‌ಟಿಜಿಎಸ್‌ ಮೂಲಕವೇ ಅವರಿಂದ ಹಣ ಪಡೆದಿದ್ದೇನೆ. ಇದನ್ನು ಬಿಟ್ಟು ಬೇರೆ ಯಾವುದೇ ಹಣ ಪಡೆದಿಲ್ಲ ಎಂದು ಎಸ್​ಐಟಿ ವಿಚಾರಣೆ ವೇಳೆ ಕೂಡ ತಿಳಿಸಿದ್ದರು.

ಸದ್ಯ ಮನ್ಸೂರ್ ನೀಡುವ ಮಾಹಿತಿ ಮೇಲೆ ಜಮೀರ್​ಗೆ ನೋಟಿಸ್ ನೀಡಬೇಕಾ..?! ಅಥವಾ ಬೇಡವಾ ಅನ್ನೋದ್ರ ಬಗ್ಗೆ ನಿರ್ಧಾರವಾಗಲಿದೆ. ಸದ್ಯ ಹಣದ ಬಗ್ಗೆ ತನಿಖೆಯ ಆಳಕ್ಕಿಳಿದು ಸಿಬಿಐ ಪರಿಶೀಲನೆ ಮಾಡ್ತಿದೆ.

ABOUT THE AUTHOR

...view details