ಕರ್ನಾಟಕ

karnataka

ETV Bharat / state

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಎಫ್​ಐಆರ್ ದಾಖಲಿಸಿದ ಸಿಬಿಐ - ಎಸ್‌ಐಟಿ ಮುಖ್ಯಸ್ಥ ಬಿ.ಆರ್‌. ರವಿಕಾಂತೇಗೌಡ

ಐಎಂ​ಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್​​​ ಸೇರಿದಂತೆ ಹಲವರನ್ನು ಎಸ್​​ಐಟಿ ಅಧಿಕಾರಿಗಳು ಬಂಧನ ಮಾಡಿದ್ರು. ಹೀಗಾಗಿ ಸಿಬಿಐ ಎಫ್ಐಆರ್ ದಾಖಲು ಮಾಡಿದ್ದು, ಈಗಾಗ್ಲೇ ಸಿಬಿಐ ತಂಡ ಎಸ್ಐಟಿಯಿಂದ ಮಾಹಿತಿ ಕಲೆ ಹಾಕಿದ್ದಾರೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣ

By

Published : Sep 2, 2019, 1:42 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನ ರಾಜ್ಯ ಸರ್ಕಾರ ಈಗಾಗ್ಲೇ ಸಿಬಿಐಗೆ ವರ್ಗಾವಣೆ ಮಾಡಿದೆ. ಹೀಗಾಗಿ ಸಿಬಿಐ ತಂಡ ಎಫ್​​​ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಎಸ್‌ಐಟಿ ಮುಖ್ಯಸ್ಥ ಬಿ.ಆರ್‌. ರವಿಕಾಂತೇಗೌಡ ಮತ್ತು ತನಿಖಾಧಿಕಾರಿ ಗಿರೀಶ್ ತಂಡ ಐಎಂಎ ಪ್ರಕರಣದಲ್ಲಿ ಮನ್ಸೂರ್​​​ ಸೇರಿದಂತೆ ಹಲವಾರು ಮಂದಿಯನ್ನ ಬಂಧನ ಮಾಡಿದ್ರು. ಹೀಗಾಗಿ ಸಿಬಿಐ ಎಫ್ಐಆರ್ ದಾಖಲು ಮಾಡಿದ್ದು, ಈಗಾಗ್ಲೇ ಸಿಬಿಐ ತಂಡ ಎಸ್ಐಟಿಯಿಂದ ಮಾಹಿತಿ ಕಲೆ ಹಾಕಿದೆ.

ಎಫ್​ಐಆರ್ ದಾಖಲಿಸಿದ ಸಿಬಿಐ

ಎಫ್ಐರ್​​ನಲ್ಲಿ ಕಂಪನಿಯ ಮಾಲೀಕ ಮನ್ಸೂರ್ ಖಾನ್, ನಿರ್ದೇಶಕ ಹಾಗೂ ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ನಿರ್ದೇಶಕರಿಗೆ ಹಾಗೂ ಐಎಂಎಗೆ ಸಂಬಂಧಿಸಿದ ಇತರ 30 ಸಂಸ್ಥೆಗಳನ್ನ ಎಫ್ಐಆರ್​​ನಲ್ಲಿ ಉಲ್ಲೇಖ ಮಾಡಿ ತನಿಖೆಗೆ ಹೈದರಾಬಾದ್ ಹಾಗೂ ಬೆಂಗಳೂರು ಅಧಿಕಾರಿಗಳನ್ನು ಒಳಗೊಂಡ ತಂಡ ರಚನೆ ಮಾಡಿ, ಪ್ರಕರಣದ ಮಾಹಿತಿಯನ್ನು ಸಾಕ್ಷಿ ಸಮೇತ ಸಿಬಿಐ ಅಧಿಕಾರಿಗಳು ಕಲೆ ಹಾಕ್ತಿದ್ದಾರೆ.

ಏನಿದು ಪ್ರಕರಣ:

ಕಮರ್ಷಿಯಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಐಎಂಎ ಜ್ಯೂವೆಲರಿ ಮಾಲೀಕ ಮನ್ಸೂರ್​​​ ಜ್ಯೂವೆಲರಿ ಮೇಲೆ ಹೂಡಿಕೆ ಮಾಡಿಸಿ ಪಂಗನಾಮ ಹಾಕಿದ್ದ. ಈ ಸಂಬಂಧ ಮೊದಲು ಕಮರ್ಷಿಯಲ್ ಠಾಣೆಯಲ್ಲಿ ದೂರು ದಾಖಲಾಗಿ, ನಂತ್ರ ಈ ಪ್ರಕರಣ ಗಂಭೀರವಾದ ಕಾರಣ ಎಸ್ಐಟಿಗೆ ವರ್ಗಾವಣೆಯಾಗಿತ್ತು. ಸಿಬಿಐಗೆ ಕೋರಿ ಹೈಕೋರ್ಟ್​ಗೆ ಕೂಡ ಪಿಐಎಲ್ ಸಲ್ಲಿಕೆಯಾಗಿತ್ತು. ಸದ್ಯ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ನೀಡಿದೆ.

ABOUT THE AUTHOR

...view details