ಕರ್ನಾಟಕ

karnataka

ETV Bharat / state

ಐಎಂಎ ಜ್ಯುವೆಲ್ಲರ್ಸ್ ದೋಖಾ ಪ್ರಕರಣ: ಮಾಲೀಕನ‌ ಮೇಲೆ ದಾಖಲಾಯ್ತು13 ಸಾವಿರ ಕೇಸ್ - undefined

ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್​ ಮೇಲೆ ಎರಡೇ ದಿನದಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಮಾಲೀಕ ಮನ್ಸೂರ್

By

Published : Jun 12, 2019, 10:18 AM IST

Updated : Jun 12, 2019, 10:46 AM IST

ಬೆಂಗಳೂರು:ಐಎಮ್​ಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಮಾಲೀಕ ಮನ್ಸೂರ್​​ ಮೇಲೆ ಎರಡೇ ದಿನದಲ್ಲಿ ಸುಮಾರು13 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಮೊದಲ‌ ದಿನ 3,750 ಕ್ಕಿಂತ ಹೆಚ್ಚು ದೂರು ದಾಖಲಾಗಿದ್ದವು. ನಂತ್ರ ಎರಡನೇ ದಿನ 13,000ಕ್ಕೂ ಅಧಿಕ ಪ್ರಕರಣಗಳು ದಾಖಲು ಆಗಿವೆ. ಇವತ್ತು ಹೊರ ರಾಜ್ಯಗಳಿಂದ ಹೂಡಿಕೆ ಮಾಡಿದ ಜನರು ಬಂದು ದೂರು ನೀಡಲಿದ್ದಾರೆ. ಹೀಗಾಗಿ ಇವತ್ತು ದೂರುಗಳ‌ ಸಂಖ್ಯೆ ದುಪ್ಪಟ್ಟಾಗುವ‌ ಸಾಧ್ಯತೆ ಇದೆ.

ಮಾಲೀಕನ‌ ಮೇಲೆ ದಾಖಲಾಯ್ತು13 ಸಾವಿರ ಕೇಸ್

‌ಮತ್ತೊಂದೆಡೆ ಐಎಂಎ ಜ್ಯುವೆಲ್ಲರ್ಸ್ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಮನೆಗೆ ಐಎಂಎ ಜ್ಯುವೆಲ್ಲರಿ ಹೂಡಿಕೆದಾರರು ಮುತ್ತಿಗೆ ಹಾಕೋ ಸಾಧ್ಯತೆ ಹಿನ್ನೆಲೆ ರಾತ್ರಿಯಿಡಿ ರೋಷನ್ ಬೇಗ್ ಮನೆಗೆ ಪೊಲೀಸ್ ಭದ್ರತೆ ನೀಡಲಾಯ್ತು. ನಿನ್ನೆ ರಾತ್ರಿ ದಿಢೀರ್​​ ರೋಷನ್ ಬೇಗ್ ಮನೆಗೆ ಐಎಂಎ ಜ್ಯುವೆಲ್ಲರಿಯಲ್ಲಿ ಹಣ ಕಳೆದುಕೊಂಡರು ಮುತ್ತಿಗೆ ಯತ್ನ ಮಾಡಿದ್ರು‌.

ಈ ವೇಳೆ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಪ್ರಯತ್ನ ಮಾಡಿದ್ರು. ಮತ್ತೊಂದೆಡೆ, ಶಾಸಕ ರೋಷನ್ ಬೇಗ್ ದೆಹಲಿಯಲ್ಲಿಯೇ ವಾಸ್ತವ ಹೂಡಿದ್ದು, ರೋಷನ್ ಬೇಗ್​​​ ಬರುವಿಕೆಗಾಗಿ ಹೂಡಿಕೆದಾರರು ಕಾದಿದ್ದಾರೆ.

Last Updated : Jun 12, 2019, 10:46 AM IST

For All Latest Updates

TAGGED:

ABOUT THE AUTHOR

...view details