ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ : ಮತ್ತೆ ಐವರನ್ನು ಬಂಧಿಸಿದ ಎಸ್ಐಟಿ - undefined

ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ತನಿಖಾ ತಂಡ, ಸಂಸ್ಥಗೆ ಸಂಬಂಧಪಟ್ಟ ಐವರು ಆರೋಪಿಗಳನ್ನು ಬಂಧಿಸಿದೆ. ಇವರು ಕಂಪನಿಗೆ ಹಣ ಹೂಡಿಕೆ ಮಾಡುವಂತೆ ಜನರ ಮನವೊಲಿಸುವ ಕೆಲಸ ಮಾಡುತ್ತಿದ್ದರು.

ಐಎಂಎ ಸಂಸ್ಥೆ

By

Published : Jun 21, 2019, 4:30 PM IST

ಬೆಂಗಳೂರು :ಐಎಂಎ ಸಂಸ್ಥೆಯ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ತನಿಖಾ ತಂಡ ಸಂಸ್ಥೆಗೆ ಸಂಬಂಧಪಟ್ಟ ಐವರು ಆರೋಪಿಗಳನ್ನು ಬಂಧಿಸಿದೆ.

ಬಂಧಿತ ಆರೋಪಿಗಳು

ಶಾದಬ್ ಅಹಮ್ಮದ್, ಇಸ್ರಾರ್ ಅಹಮ್ಮದ್, ಪುಸೈಲ್ ಅಹಮ್ಮದ್, ಮಹಮ್ಮದ್ ಇದ್ರಿಂಸ್, ಉಸ್ಮಾನ್ ಅಬರೇಜ್ ಬಂಧಿತ ಆರೋಪಿಗಳು. ಈ ಆರೋಪಿಗಳ ಪೈಕಿ ‌ಮೂವರು ಐಎಂಎ ಪ್ರೋಮೋಟರ್ಸ್​ಗಳಾಗಿದ್ದು, ಇನ್ನಿಬ್ಬರು‌ ಕೋ ಅಪರೇಟಿವ್ ಬ್ಯಾಂಕ್​ನ ಡೈರೆಕ್ಟರ್​ಗಳಾಗಿದ್ದಾರೆ. ಇವರು ಕಂಪನಿಗೆ ಹಣ ಹೂಡಿಕೆ ಮಾಡುವಂತೆ ಜನರ ಮನವೊಲಿಸುವ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಇವರ ಬಳಿ ಇದ್ದ ಐಎಂಎ ಜ್ಯುವೆಲ್ಲರಿಗೆ ಸಂಬಂಧಿಸಿದ ಕೆಲವು ಮಹತ್ವದ ದಾಖಲೆಗಳು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳು

ಇದುವರೆಗೆ ಸುಮಾರು 13 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ನಿನ್ನೆ ಸುಮಾರು 8.5 ಕೋಟಿ ಮೌಲ್ಯದ 30 ಕೆ.ಜಿ ತೂಕದ ಚಿನ್ನಾಭರಣ, ಸುಮಾರು 9.5 ಕೋಟಿ ಮೌಲ್ಯದ 2627 ಕ್ಯಾರೆಟ್ ಡೈಮೆಂಡ್, ಸುಮಾರು 2 ಕೋಟಿ ಮೌಲ್ಯದ 450 ಕೆ.ಜಿ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಐಟಿ ಅಧಿಕೃತ ಮಾಹಿತಿ ನೀಡಿದೆ.

For All Latest Updates

TAGGED:

ABOUT THE AUTHOR

...view details