ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ: ಏಳು ನಿರ್ದೇಶಕರು ಮತ್ತೆ ಎಸ್ಐಟಿ ವಶಕ್ಕೆ - KN_BNG_9_21_IMA_BHAVYA_7204498

ಐಎಂಎ ಸಂಸ್ಥೆಯ ಏಳು ಮಂದಿ ನಿರ್ದೇಶಕರಾದ ನಿಜಾಮುದ್ದೀನ್, ನಾಸೀರ್, ಹುಸೇನ್, ನವೀದ್ ಅಹಮದ್, ಆರ್ಷದ್ ಖಾನ್, ವಾಸೀಂ, ದಾದಾಫೀರ್ ಹಾಗೂ ಅನ್ವರ್ ಪಾಷರನ್ನ ಕಳೆದ ವಾರ ಬಂಧಿಸಲಾಗಿತ್ತು. ಇದೀಗ ಅವರನ್ನು ಮತ್ತೆ ಎಸ್​ಐಟಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಐಎಂಎ ವಂಚನೆ ಪ್ರಕರಣ : ಏಳು ನಿರ್ದೇಶಕರು ಮತ್ತೆ ಎಸ್ಐಟಿ ವಶಕ್ಕೆ

By

Published : Jun 21, 2019, 7:12 PM IST

ಬೆಂಗಳೂರು: ಐಎಂಎ ಸಂಸ್ಥೆಯ ವಂಚನೆ ಪ್ರಕರಣದಲ್ಲಿ ಭಾಗಿಯಾದ ನಿರ್ದೇಶಕರನ್ನ ಎಸ್​ಐಟಿ ಅಧಿಕಾರಿಗಳು ಇಂದು 4ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ರು.

ಐಎಂಎ ವಂಚನೆ ಪ್ರಕರಣ : ಏಳು ನಿರ್ದೇಶಕರು ಮತ್ತೆ ಎಸ್ಐಟಿ ವಶಕ್ಕೆ

ಹೆಚ್ಚಿನ ವಿಚಾರಣೆಗೆ ಎಸ್ಐಟಿ‌ ಅಧಿಕಾರಿಗಳು ನ್ಯಾಯಾಲಯದಲ್ಲಿ ಕಾಲಾವಕಾಶ ಕೋರಿದ್ದರಿಂದ ಮತ್ತೆ ಐದು ದಿನಗಳ ಕಾಲ ಆರೋಪಿಗಳನ್ನ ಎಸ್ಐಟಿ ವಶಕ್ಕೆ ನೀಡಲಾಗಿದೆ.

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ‌ ಮನ್ಸೂರ್ ಖಾನ್ ತಲೆ ಮರೆಸಿಕೊಂಡಿದ್ದಾನೆ. ಹೀಗಾಗಿ ಸಂಸ್ಥೆಯ ಏಳು ನಿರ್ದೇಶಕರಾದ ನಿಜಾಮುದ್ದೀನ್, ನಾಸೀರ್, ಹುಸೇನ್, ನವೀದ್ ಅಹಮದ್, ಆರ್ಷದ್ ಖಾನ್, ವಾಸೀಂ, ದಾದಾಫೀರ್ ಹಾಗೂ ಅನ್ವರ್ ಪಾಷರನ್ನ ಕಳೆದ ವಾರ ಎಸ್​ಐಟಿ ತಂಡ ಬಂಧಿಸಿತ್ತು.

ಈ ಆರೋಪಿಗಳಿಗೆ ಐಎಂಎ ಜ್ಯುವೆಲ್ಲರಿ ಹೂಡಿಕೆಯ ಸಂಪೂರ್ಣ ಮಾಹಿತಿ ತಿಳಿದಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

For All Latest Updates

ABOUT THE AUTHOR

...view details