ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ: ಎಫ್ಐಆರ್​​ನಲ್ಲಿ ಇದ್ದ ಹೆಸರು ಚಾರ್ಜ್​ಶೀಟ್​​ನಲ್ಲಿ ಕಣ್ಮರೆ! - ಮಾಜಿ ಡಿಸಿ ವಿಜಯಶಂಕರ್

ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಪ್ರಕರಣದ ಪ್ರಾಥಮಿಕ ತನಿಖೆಯ ಚಾರ್ಜ್​ಶೀಟ್​​ಅನ್ನು ಸಿಬಿಐ ನ್ಯಾಯಾಲಕ್ಕೆ ಸಲ್ಲಿಕೆ ಮಾಡಿದ್ದು, ಈ ವೇಳೆ ಸಿಬಿಐ ಎಫ್ಐಆರ್​​ನಲ್ಲಿ ಇದ್ದ ಹೆಸರು ಚಾರ್ಜ್​ಶೀಟ್​​ನಲ್ಲಿ ಕಣ್ಮರೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಚಾರ್ಜ್ ಶೀಟ್ ನಲ್ಲಿ ಐವರು ಹೆಸರು ಕೈ ಬಿಟ್ಟ ಸಿಬಿಐ

By

Published : Sep 30, 2019, 4:55 PM IST

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಪ್ರಕರಣದ ಪ್ರಾಥಮಿಕ ತನಿಖೆಯ ಚಾರ್ಜ್​ಶೀಟ್​​ಅನ್ನು ಸಿಬಿಐ ನ್ಯಾಯಾಲಕ್ಕೆ ಸಲ್ಲಿಕೆ ಮಾಡಿದ್ದು, ಈ ವೇಳೆ ಸಿಬಿಐ ಎಫ್ಐಆರ್​​​​ನಲ್ಲಿ ಇದ್ದ ಹೆಸರು ಚಾರ್ಜ್​ಶೀಟ್​​ನಲ್ಲಿ ಕಣ್ಮರೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

26 ಮಂದಿ ವಿರುದ್ಧ ಸಿಬಿಐ ಎಫ್​​ಐಆರ್ ದಾಖಲು ಮಾಡಿತ್ತು. ಆದ್ರೆ ಚಾರ್ಜ್​ಶೀಟ್​​ನಲ್ಲಿ 20 ಆರೋಪಿಗಳ ಹೆಸರು ಮಾತ್ರ ಉಲ್ಲೇಖ ಮಾಡಿದ್ದು, ಬೆಂಗಳೂರು ನಗರ ಮಾಜಿ ಡಿಸಿ ವಿಜಯಶಂಕರ್, ಮಾಜಿ ಎಸಿಎಲ್​​ಸಿ ನಾಗರಾಜ್, ಬಿಡಿಎ ಎಂಜಿನಿಯರ್ ಪಿ.ಡಿ.ಕುಮಾರ್ ಮತ್ತು ಗ್ರಾಮ ಲೆಕ್ಕಿಗ ಮಂಜುನಾಥ್ ಹೆಸರು ಕೈ ಬಿಟ್ಟು ಇತ್ತೀಚಿಗಷ್ಟೇ ಸಿಬಿಐ ವಿಶೇಷ ನ್ಯಾಯಾಲಯಕ್ಕೆ 5600 ಪುಟಗಳ ಬೃಹತ್ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ.

ಚಾರ್ಜ್​ಶೀಟ್​ನಲ್ಲಿ ಐವರು ಹೆಸರು ಕೈ ಬಿಟ್ಟ ಸಿಬಿಐ
ಹಾಗಾದ್ರೆ ಈ ನಾಲ್ವರು ಆರೋಪಿಗಳನ್ನ ಚಾರ್ಜ್​ಶೀಟ್​​ನಿಂದ ಕೈ ಬಿಟ್ಟಿದ್ದು ಏಕೆ?ಮಾಜಿ ಡಿಸಿ ವಿಜಯಶಂಕರ್ ಐಎಎಸ್‌ ಅಧಿಕಾರಿಯಾಗಿದ್ದಾರೆ. ಐಎಎಸ್ ಅಧಿಕಾರಿ ಮೇಲೆ ಚಾರ್ಜ್​ಶೀಟ್ ಮಾಡಲು ಸರ್ಕಾರದ ಅನುಮತಿ, ಹಾಗೆಯೇ ಯುಪಿಎಸ್​ಸಿ ಹಾಗೂ ರಾಷ್ಟ್ರಪತಿಗಳ ಅನುಮತಿ ಪಡೆದು ದೋಷಾರೋಪ ಪಟ್ಟಿ ಮಾಡಬೇಕು. ಸದ್ಯ ಮಾಜಿ ಡಿಸಿ ಮೇಲಿನ ಆರೋಪದ ಬಗ್ಗೆ ಅಧಿಕಾರಿಗಳು ವರದಿ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮಾಜಿ ಎಸಿಎಲ್​ಸಿ ನಾಗರಾಜ್, ಬಿಡಿಎ ಎಂಜಿನಿಯರ್ ಕುಮಾರ್, ಗ್ರಾಮ ಲೆಕ್ಕಿಗ ಮಂಜುನಾಥ್ ಹೆಸರು ಉಲ್ಲೇಖ ಮಾಡಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು. ಸದ್ಯ ಇದ್ಯಾವುದನ್ನ ಉಲ್ಲೇಖ ಮಾಡದೆ ಇರುವುದು ಅನುಮಾನ ಮೂಡಿಸಿದೆ.

ABOUT THE AUTHOR

...view details