ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ: ಮತ್ತೆ ಇಡಿ ವಶಕ್ಕೆ ‌ಮನ್ಸೂರ್‌ ಖಾನ್‌, ವಿಜಯ್‌ ಶಂಕರ್‌ಗೆ ಬೇಲ್

ಕಳೆದು ತಿಂಗಳು ಬೆಳಕಿಗೆ ಬಂದಿದ್ದ ಐಎಂಎ ಜ್ಯುವೆಲ್ಸ್ ಮಾಲೀಕ ಮೊಹಮದ್ ಮನ್ಸೂರ್ ಅಲಿ ಖಾನ್​ನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮನ್ಸೂರ್ ಖಾನ್​ನನ್ನ ಇಡಿ ಅಧಿಕಾರಿಗಳ ವಶಕ್ಕೆ ನೀಡಿದೆ.

ಐಎಂಎ ವಂಚನೆ ಪ್ರಕರಣ

By

Published : Jul 26, 2019, 6:02 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಅವರನ್ನು ಮತ್ತೆ ವಿಚಾರಣೆಗಾಗಿ ಇಡಿ ಅಧಿಕಾರಿಗಳ ವಶಕ್ಕೆ ಕೋರ್ಟ್ ಒಪ್ಪಿಸಿದೆ.

ಇಂದು ಆರೋಪಿ ಮನ್ಸೂರ್ ಅವರನ್ನು ಸಂಜೆ 3.15 ರ ಸಮಯದಲ್ಲಿ ಇಡಿ ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆತಂದು ಸಿಟಿ ಸಿವಿಲ್ ಕೋರ್ಟ್​ಗೆ ಹಾಜರು ಪಡಿಸಿದ್ದು, ಸಿಟಿ ಸಿವಿಲ್​ನ ಕೋರ್ಟ್‌ನಲ್ಲಿ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ರು.

ಈ ವೇಳೆ ಇಡಿ ಪರ ವಕೀಲ ಮನ್ಸೂರ್​ಗೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಸರಿಯಾದ ತನಿಖೆ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ರು. ನ್ಯಾಯಾಲಯದಲ್ಲಿ ವಾದ ವಿವಾದ ಆಲಿಸಿದ ನಂತರ ಮನ್ಸೂರ್ ಖಾನ್ ನನ್ನ ಮತ್ತೆ 5 ದಿನಗಳ ಕಾಲ ಇಡಿ ವಶಕ್ಕೆ ನೀಡಿ ನ್ಯಾಯಾಧೀಶ ಶಿವಶಂಕರ ಅಮರಣ್ಣ ಆದೇಶ ಹೊರಡಿಸಿದರು.

ಮೂರನೇ ಬಾರಿಗೆ ಮತ್ತೆ ಇಡಿ ಅಧಿಕಾರಿಗಳ ವಿಚಾರಣೆಗೆಂದು ಕೋರ್ಟ್ ಮುಂದಿನ ತಿಂಗಳು 1 ನೇ ತಾರೀಖಿನವರೆಗೆ ವಶಕ್ಕೆ ನೀಡಿದೆ.

ಮೂವರು ಆರೋಪಿಗಳಿಗೆ ಜಾಮೀನು:

ಇನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಮತ್ತು ಸಹಾಯಕ ಆಯುಕ್ತ ನಾಗರಾಜ್ ಸೇರಿದಂತೆ ಮೂವರು ಅಧಿಕಾರಿಗಳಿಗೆ ಜಾಮೀನು ನೀಡಲಾಗಿದೆ. ಹಾಗೆ ಪ್ರಕರಣದ ಮತ್ತೊಬ್ಬ ಆರೋಪಿ ಪಾದ್ರಿ ಹನೀಫ್ ಅಫ್ಸರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ.

For All Latest Updates

TAGGED:

ABOUT THE AUTHOR

...view details