ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ : ಮತ್ತೆ ವಿಚಾರಣೆಗೆ ಹಾಜರಾದ ಡಿಸಿಪಿ ಅಜಯ್ ಹಿಲೋರಿ - DCP Ajay Hillary

ಐಎಂಎ ವಂಚನೆ ಪ್ರಕರಣ ಸಂಬಂಧ ನಿನ್ನೆಯಷ್ಟೆ ವಿಚಾರಣೆಗೆ ಹಾಜರಾಗಿದ್ದ ಅಜಯ್ ಹಿಲೋರಿ, ಇಂದೂ ಕೂಡ ಮತ್ತೆ ಎಸ್ಐಟಿ ಅಧಿಕಾರಿ ರವಿಕಾಂತೇಗೌಡ ಹಾಗೂ ಡಿಸಿಪಿ ಗಿರೀಶ್ ಎದುರು ಹಾಜರಾದರು.

ಡಿಸಿಪಿ ಅಜಯ್ ಹಿಲೋರಿ

By

Published : Aug 3, 2019, 2:19 PM IST

Updated : Aug 3, 2019, 2:28 PM IST

ಬೆಂಗಳೂರು:ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್​​ಐಟಿ ಎದುರುಡಿಸಿಪಿ ಅಜಯ್ ಹಿಲೋರಿ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.

ನಿನ್ನೆಯಷ್ಟೆ ವಿಚಾರಣೆಗೆ ಹಾಜರಾಗಿದ್ದ ಅಜಯ್ ಹಿಲೋರಿ, ಇಂದೂ ಕೂಡ ಮತ್ತೆ ಎಸ್ಐಟಿ ಅಧಿಕಾರಿ ರವಿಕಾಂತೇಗೌಡ ಹಾಗೂ ಡಿಸಿಪಿ ಗಿರೀಶ್ ಎದುರು ಹಾಜರಾಗಿದ್ದಾರೆ. ಐಎಂಎ ವಂಚನೆ ಪ್ರಕರಣವನ್ನ 2018ರಲ್ಲಿ ಆರ್​​ಬಿಐ ಸರ್ಕಾರಕ್ಕೆ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಆದರೆ ಡಿಸಿಪಿ ಅಜಯ್ ಹಿಲೋರಿ‌ ಐಎಂಎ ಅಕ್ರಮ ಕುರಿತು ತನಿಖೆ ನಡೆಸದೆ ಆರೋಪಿ ಮನ್ಸೂರ್​​ನಿಂದ ಹಣ ಪಡೆದಿರುವ ಆರೋಪ ಇದೆ.

ಎಸ್ಐಟಿ ವಿಚಾರಣೆಗೆ ಹಾಜರಾದ ಡಿಸಿಪಿ ಅಜಯ್ ಹಿಲೋರಿ

ನಿನ್ನೆ ಎರಡು ಗಂಟೆಗೂ ಹೆಚ್ಚು ಸಮಯ ವಿಚಾರಣೆ ನಡೆಸಿ, ಇಂದು ಕೆಲ ದಾಖಲೆ ತರುವಂತೆ ಎಸ್​​ಐಟಿ ಅಧಿಕಾರಿಗಳು ಸೂಚನೆ ನೀಡಿದ್ದರು. ಹೀಗಾಗಿ ಇಂದು ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.

Last Updated : Aug 3, 2019, 2:28 PM IST

ABOUT THE AUTHOR

...view details