ಬೆಂಗಳೂರು:ಐಎಂಎ ಸಂಸ್ಥೆಯ ಜ್ಯುವೆಲ್ಲರಿ ಶಾಪ್ಗಳ ಮೇಲೆ ದಾಳಿ ನಡೆಸಿದ ಎಸ್ಐಟಿ ಲಾಕ್ ತೆಗೆದು ಅಂಗಡಿಯಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಜ್ರ ಹಾಗೂ ಚಿನ್ನಾಭರಣಗಳನ್ನು ಎಸ್ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎಗೆ ಸೇರಿದ ಚಿನ್ನಾಭರಣ ಅಂಗಡಿಗಲ್ಲಿ ಶೋಧ ಕಾರ್ಯ ನಡೆಸಿದ ಎಸ್ಐಟಿ ತಂಡ ಸುಮಾರು 41 ಕೆ.ಜಿ. ಚಿನ್ನ ಜಪ್ತಿ ಮಾಡಿಕೊಂಡಿದೆ. ಇಷ್ಟು ತೂಕದ ಚಿನ್ನಾಭರಣವನ್ನು ನಾಲ್ಕು ಟ್ರಂಕ್ಗಳ ಮೂಲಕ ಸಾಗಿಸಲಾಗಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಂದ ಜಪ್ತಿ ಮಾಡಿಕೊಂಡಿರುವ ಕೋಟ್ಯಂತರ ಮೌಲ್ಯದ ನಗದು ಅಥವಾ ಚಿನ್ನಾಭರಣವನ್ನು ಭದ್ರವಾಗಿಡಲು ಸಾಮಾನ್ಯವಾಗಿ ಶಕ್ತಿಸೌಧ ಎಂದೇ ಹೆಸರಾಗಿರುವ ವಿಧಾನಸೌಧದ ಖಜಾನೆ ವಿಭಾಗದಲ್ಲಿ ಇಡುತ್ತಾರೆ. ಯಾಕೆಂದರೆ ಹೆಚ್ಚಿನ ಭದ್ರತೆ ಇರುವ ಸ್ಥಳವೆಂದೇ ಹೆಸರಾಗಿರುವ ವಿಧಾನಸೌಧಕ್ಕೆ ಅಪರಿಚಿತರು ಯಾರಿಗೂ ಪ್ರವೇಶವಿರಲ್ಲ. ಹೀಗಾಗಿ ವಶಪಡಿಸಿಕೊಂಡಿರುವ ಐಎಂಎ ಸ್ವತ್ತು ಇಲ್ಲಿ ಭದ್ರವಾಗಿರಲಿದೆ ಎಂದು ಹೆಳಲಾಗ್ತಿದೆ.
ಜಪ್ತಿ ಮಾಡಿಕೊಂಡಿರುವ ಚಿನ್ನಾಭರಣಗಳ ಬಗ್ಗೆ ಹೂಡಿಕೆದಾರರಿಗೆ ಕೊಂಚ ಸಮಾಧಾನವಾಗಿದೆ. ಆದ್ರೆ ಹೂಡಿಕೆ ಮಾಡಿರುವ ಚಿನ್ನಾಭರಣವನ್ನು ಪಡೆಯಲು ಕಾನೂನಿನ ಮೊರೆ ಹೋಗಬೇಕಿದೆ. ಈಗಾಗಲೇ ದೂರು ನೀಡಿರುವ ಎಲ್ಲ 35 ಸಾವಿರ ಮಂದಿ ಹೂಡಿಕೆದಾರರು ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವ ಸೂಕ್ತ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಟ್ಟು, ಅಲ್ಲಿಂದ ಅನುಮತಿ ಪಡೆದಾಗ ಮಾತ್ರ ಎಸ್ಐಟಿ ಅಧಿಕಾರಿಗಳು ಅವರಿಗೆ ಚಿನ್ನ ಮರಳಿಸಲು ಸಾಧ್ಯವಾಗಲಿದೆ.