ಬೆಂಗಳೂರು: ಐಎಂಎ ಬಹುಕೊಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನ ಸಿಬಿಐ ತಂಡ 1ನೇ ಸಿಸಿ ಹೆಚ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಮನ್ಸೂರ್ ಖಾನ್ ಸೇರಿದಂತೆ ಒಟ್ಟು 25ಮಂದಿಯ ಹೆಸರನ್ನ ಉಲ್ಲೇಖ ಮಾಡಿ ಸಾವಿರ ಪುಟಗಳ ದೋಷಾರೋಪ ಪಟ್ಟಿ ಕೋರ್ಟ್‌ಗೆ ಸಲ್ಲಿಸಲಾಗಿದೆ.
ದೋಷಾರೋಪ ಪಟ್ಟಿಯಲ್ಲಿ ಐಎಂಎ ಕಂಪೆನಿಯ 12 ನಿರ್ದೆಶಕರು, ಮೌಲ್ವಿಗಳು, ನಾಟಿ ವೈದ್ಯ, ನಗರ ಜಿಲ್ಲಾಧಿಕಾರಿ ವಿಜಯ ಶಂಕರ್, ಉಪ ವಿಭಾಗದ ಅಧಿಕಾರಿ ಎಲ್ ಸಿ ನಾಗರಾಜ್, ಗ್ರಾಮ ಲೆಕ್ಕಿಗ ಮಂಜುನಾಥ್, ಬಿಡಿಎ ಇಂಜಿನಿಯರ್ ಕುಮಾರ್, ಹಾಗೆ ಕಮರ್ಷಿಯಲ್ ಠಾಣೆಯಲ್ಲಿ ಮೋಸಹೋದವರ 52ಸಾವಿರ ಮಂದಿಯ ಹೇಳಿಕೆ, ಎಸ್ಐಟಿ ತನಿಖೆಯಲ್ಲಿ ಮನ್ಸೂರು ಬಿಚ್ಚಿಟ್ಟ ವಿಚಾರ, ರಾಜಾಕಾರಣಿಗಳ ಹೆಸರುಗಳನ್ನ ಉಲ್ಲೇಖ ಮಾಡಲಾಗಿದೆ.