ಕರ್ನಾಟಕ

karnataka

ETV Bharat / state

ಸಾಕ್ಷಿದಾರರಿಗೆ ಬೇಗ್​ ಕಡೆಯಿಂದ ಬೆದರಿಕೆ ಆರೋಪ: ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆ - ರೋಷನ್ ಬೇಗ್​ರಿಂದ ಕಿರುಕುಳ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ವಿರುದ್ಧ ಸಾಕ್ಷಿ ಹೇಳಿದ್ದ ಇಷ್ತಿಯಾಕ್ ಪೈಲ್ವಾನ್​ಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಇಷ್ತಿಯಾಕ್ ಪತ್ನಿ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆ

By

Published : Nov 1, 2019, 1:20 AM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಅನೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರು ಕೇಳಿ ಬರುತ್ತಿದೆ, ಅದರಲ್ಲಿ ಪ್ರಮುಖವಾಗಿ ಮಾಜಿ ಸಚಿವ ರೋಷನ್ ಬೇಗ್ ಸಹ ಸೇರಿದ್ದಾರೆ. ಪೊಲೀಸರನ್ನು ಬಳಸಿ ರೋಷನ್ ಬೇಗ್ ರಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಇಷ್ತಿಯಾಕ್ ಪೈಲ್ವಾನ್ ಎಂಬುವವರ ಪತ್ನಿ ಫರೀದಾರಿಂದ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.

ಅರ್ಜಿದಾರೆ ಫರೀದಾ ಇಷ್ತಿಯಾಕ್, ಶಿವಾಜಿನಗರ ಕಾರ್ಪೊರೇಟರ್ ಆಗಿದ್ದು, ಐಎಂಎ ಪ್ರಕರಣದಲ್ಲಿ ತಮ್ಮ ಪತಿ ಇಷ್ತಿಯಾಕ್ ಸಾಕ್ಷಿಯಾಗಿದ್ದಾರೆ. ಐಎಂಎ ಕಂಪನಿಯಿಂದ ರೋಷನ್ ಬೇಗ್ 1.50 ಕೋಟಿ ಪಡೆದಿದ್ದಾರೆಂದು ಸಾಕ್ಷಿ ಹೇಳಿರುವ ಕಾರಣ, ಪದೇ ಪದೇ ಪೊಲೀಸ್ ಠಾಣೆಗೆ ವಿನಾಕಾರಣ ಕರೆಸಿ ಹಿಂಸೆ ನೀಡುತ್ತಿದ್ದಾರೆ. ಪೋಲಿಸರನ್ನು ಉಪಯೋಗಿಸಿಕೊಂಡು ಗೂಂಡಾ ಕಾಯ್ದೆಯಡಿ ಬಂಧಿಸುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಹಿಂದಿನ ಸರ್ಕಾರ ಬೀಳಿಸುವುದರಲ್ಲಿ ರೋಷನ್ ಪ್ರಧಾನ ಪಾತ್ರ ವಹಿಸಿದ್ದರು. ಅದೇ ರೀತಿಯ ಪ್ರಭಾವದಿಂದ ನಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಫರೀದಾ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಾಂಡಿಸಿದ್ದಾರೆ. ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಹಾಗೂ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ನೀಡಿ ಆಕ್ಷೇಪಣೆ ಸಲ್ಲಿಸಿ ಉತ್ತರಿಸುವಂತೆ ಸೂಚಿಸಿದ್ದು, ವಿಚಾರಣೆ ಮುಂದೂಡಿಕೆಯಾಗಿದೆ.

ABOUT THE AUTHOR

...view details