ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾದ್ರು.
ಐಎಂಎ ವಂಚನೆ ಪ್ರಕರಣ: ಮತ್ತೆ ಬೀದಿಗಿಳಿದ ಗ್ರಾಹಕರು - ಐಎಂಎ ಪ್ರಕರಣ ಸುದ್ದಿ
ಐಎಂಎ ಜ್ಯುವೆಲ್ಲರಿ ಪ್ರಕರಣದಲ್ಲಿ ಮೋಸ ಹೋದ ಗ್ರಾಹಕರು ಶಿವಾಜಿನಗರದ ಐಎಂಎ ಕಚೇರಿ ಮುಂದೆ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಐಎಂಎ ಜ್ಯುವೆಲ್ಲರಿಯಲ್ಲಿ ಬಹಳಷ್ಟು ಜನರಿಂದ ಹೂಡಿಕೆ ಮಾಡಿಸಿ ರಾತ್ರೋ ರಾತ್ರಿ ಎಸ್ಕೇಪ್ ಆಗಿದ್ದ. ಹೀಗಾಗಿ ರೊಚ್ಚಿಗೆದ್ದ ಗ್ರಾಹಕರು ಹಿಂದೊಮ್ಮೆ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು ಮನ್ಸೂರ್ ಖಾನ್ನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ. ಈ ಮಧ್ಯೆ ಸ್ವಯಂಪ್ರೇರಿತವಾಗಿ ಐಎಂಎ ಕಚೇರಿಯತ್ತ ಆಗಮಿಸಿದ ನೂರಾರು ಹೂಡಿಕೆದಾರರು ಪುನಃ ಪ್ರತಿಭಟನೆಗೆ ಮುಂದಾಗಿದ್ದಾರೆ.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ ಕಚೇರಿ ಎದುರು ಪ್ರತಿಭಟನೆಗೆ ಅವಕಾಶವಿಲ್ಲ, ಬೇರೆ ಸ್ಥಳಗಳಲ್ಲಿ ಪ್ರತಿಭಟನೆ ಮಾಡಿ ಸೂಚಿಸಿದ್ದಾರೆ. ಈ ವೇಳೆ ಹೂಡಿಕೆದಾರರು ಹಾಗೂ ಪೋಲೀಸರ ನಡುವೆ ವಾಗ್ವಾದ ಉಂಟಾಯಿತು.