ಕರ್ನಾಟಕ

karnataka

ETV Bharat / state

ಐಎಂಎ ಕೇಸ್ ತನಿಖೆ ಹೇಗೆಲ್ಲ ನಡೆಯಿತು.... ಇಲ್ಲಿದೆ ಪಿನ್​​​ ಟು ಪಿನ್​ ಮಾಹಿತಿ

ಮಾಜಿ ‌ಸಚಿವ ರೋಷನ್ ಬೇಗ್ ಅವರನ್ನು ಬಂಧಿಸಿರುವ ಸಿಬಿಐ, ತನಿಖೆ ಮುಂದುವರೆಸಿದೆ. ಮುಂದಿನ ದಿನಗಳಲ್ಲಿ ಯಾರ ಮೇಲೆ ಇದರ ಕಣ್ಣು ಬೀಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ima-case-investigation-phase
ಐಎಂಎ ಕೇಸ್ ತನಿಖೆ

By

Published : Nov 23, 2020, 3:10 PM IST

ಬೆಂಗಳೂರು:ಐಎಂಎ ವಂಚನೆ ಪ್ರಕರಣದಲ್ಲಿ ಸದ್ಯ ರಾಜಕೀಯ ಬುಡಕ್ಕೂ ಕೂಡ ಸಿಬಿಐ ಕೈ ಹಾಕಿದೆ. ಮಾಜಿ ‌ಸಚಿವ ರೋಷನ್ ಬೇಗ್ ಅವರನ್ನು ಬಂಧಿಸಿ ತನಿಖೆ ಮುಂದುವರೆಸಿದೆ.

ಐಎಂಎ ಕೇಸ್ ತನಿಖೆ ಹಂತ ಹೀಗಿದೆ:

ಜೂನ್ -08,2019: ಬೆಂಗಳೂರಿನಿಂದ ಮನ್ಸೂರ್ ಖಾನ್ ಎಸ್ಕೇಪ್

ಜೂನ್ 09, 2019: ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಮೊದಲ ಕೇಸ್ ದಾಖಲು
ಜೂನ್-10,2019: ದುಬೈನಿಂದ ವಿಡಿಯೋ ಮಾಡಿ ಹರಿಬಿಟ್ಟಿದ್ದ ಮನ್ಸೂರ್
ಜೂನ್ 11,2019: ಎಸ್​​ಐಟಿಗೆ ಪ್ರಕರಣ ರವಾನೆ, ಡಿಐಜಿ ರವಿಕಾಂತೇಗೌಡ, ಡಿಸಿಪಿ ಗಿರೀಶ್ ನೇತೃತ್ವದಲ್ಲಿ ತಂಡ ರಚನೆ
ಜುಲೈ-19, 2019: ಮನ್ಸೂರ್ ಖಾನ್ ಬಂಧನ, ದುಬೈನಿಂದ ದೆಹಲಿಗೆ ಬಂದಾಗ ಇಡಿಯಿಂದ ಬಂಧನ
ಜುಲೈ-20: ಬೆಂಗಳೂರಿಗೆ ಕರೆತಂದ ಇಡಿ ಅಧಿಕಾರಿಗಳು
ಜುಲೈ-16: ಬೆಂಗಳೂರು ಏರ್ಪೋರ್ಟ್ ನಲ್ಲಿ ಎಸ್​ಐಟಿ ವಶಕ್ಕೆ ಮನ್ಸೂರ್​
ಒಂದು ದಿನ ವಿಚಾರಣೆ ಮಾಡಿ ಬಳಿಕ ಬಿಟ್ಟು ಕಳುಹಿಸಿದ್ದ ಎಸ್​ಐಟಿ
ಆಗಸ್ಟ್​- 21, 2019: ಐಎಂಎ ಪ್ರಕರಣ ಸಿಬಿಐಗೆ ರವಾನೆ
ಆಗಸ್ಟ್​-17: ಸಿಬಿಐನಿಂದ 28 ಜನರ ಮೇಲೆ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಕೆ
ಡಿಸೆಂಬರ್-20, 2019: ಐಪಿಎಸ್ ಅಧಿಕಾರಿಗಳ ವಿಚಾರಣೆ ಮಾಡಿದ್ದ ಸಿಬಿಐ
ಸೆಪ್ಟೆಂಬರ್ 15,2020: ಐಪಿಎಸ್ ಅಧಿಕಾರಿಗಳಾದ ನಿಂಬಾಳ್ಕರ್​ ಹಾಗೂ ಅಜಯ್ ಹಿಲೋರಿ, ಡಿವೈಎಸ್ಪಿ ಶ್ರೀಧರ್, ಇನ್ಸ್​ಪೆಕ್ಟರ್​​​ ರಮೇಶ್, ಎಸ್ ಐ ಗೌರಿಶಂಕರ್ ತನಿಖೆಗೆ ಸರ್ಕಾರ ಅನುಮತಿ
ನವೆಂಬರ್- 22, 2020: ಮಾಜಿ‌ ಸಚಿವ ರೋಷನ್ ಬೇಗ್ ಬಂಧನ

ಸದ್ಯ ಸಿಬಿಐ ಇನ್ನಷ್ಟು ತನಿಖೆ ಚುರುಕುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಯಾರ ಮೇಲೆ ಕಣ್ಣು ಬೀಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ABOUT THE AUTHOR

...view details