ಕರ್ನಾಟಕ

karnataka

ಐಎಂಎ ವಂಚನೆ ಪ್ರಕರಣ: ಶೀಘ್ರ ಸಿಬಿಐ ತನಿಖೆ ಆರಂಭಿಸಲು ಕೇಂದ್ರಕ್ಕೆ ಹೈಕೋರ್ಟ್​ ಸೂಚನೆ

ರಾಜ್ಯಸರಕಾರವು ಐಎಂಎ ಹಗರಣವನ್ನ ಸಿಬಿಐ ತನಿಖೆಗೆ ವಹಿಸಿದ ನಂತರವೂ ತನಿಖೆ ವಿಳಂಬವಾಗುತ್ತಿತುವುದನ್ನ ಗಮನಿಸಿದ ನ್ಯಾಯಲಯ, ಶೀಘ್ರವೆ ತನಿಖೆ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ ಆದೇಶ ನೀಡಿದೆ.

By

Published : Aug 28, 2019, 5:55 PM IST

Published : Aug 28, 2019, 5:55 PM IST

Updated : Aug 28, 2019, 6:36 PM IST

ಐಎಂಎ ಪ್ರಕರಣ: ಶೀಘ್ರವೆ ಸಿಬಿಐ ತನಿಖೆ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಹೈಕೊರ್ಟ್ ಸೂಚನೆ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಿಬಿಐ ತನಿಖೆಯನ್ನು ಶೀಘ್ರವೆ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ ಆದೇಶ ನೀಡಿದೆ. ಐಎಂಎ ವಂಚನೆ ಪ್ರಕರಣ ಕುರಿತು ಸಲ್ಲಿಕೆಯಾಗಿದ್ದ ಐದು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಇಂದು ನಡೆಯುವಾಗ ನ್ಯಾಯಲಯ ಈ ಆದೇಶ ನೀಡಿದೆ.

ರಾಜ್ಯಸರಕಾರವು ಐಎಂಎ ಹಗರಣವನ್ನ ಸಿಬಿಐ ತನಿಖೆಗೆ ವಹಿಸಿದ ನಂತರವೂ ತನಿಖೆ ವಿಳಂಬವಾಗುತ್ತಿತುವುದನ್ನ ಗಮನಿಸಿದ ನ್ಯಾಯಾಲಯ, ಕೇಂದ್ರ ಸರಕಾರಕ್ಕೆ ಈ ನಿರ್ದೇಶನ ನೀಡಿದೆ.

ಹೈಕೋರ್ಟ್ ನಲ್ಲಿ ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅಡ್ವೊಕೇಟ್ ಜನರಲ್ ತನಿಖಾ ಪ್ರಗತಿ ವರದಿಯನ್ನು ನ್ಯಾಯಲಯಕ್ಕೆ ಸಲ್ಲಿಸಿದರು. ಎಸ್ಐಟಿಯ ತಂಡ ಇಲ್ಲಿಯವರೆಗೆ ನಡೆಸಿದ ತನಿಖಾ ಕಾರ್ಯಾಚರಣೆಯಲ್ಲಿ ಬಂಗಾರದ ಬಿಸ್ಕತ್ ಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು. ಇನ್ನೂ ಇದೇ ವೇಳೆ ಕೆಪಿಐಡಿ ಕಾಯ್ದೆಯಡಿ ಪೂರ್ಣಕಾಲಿಕವಾಗಿ ನೂತನ ಸಕ್ಷಮ ಪ್ರಾಧಿಕಾರದ ಅಧಿಕಾರಿಯಾಗಿ ಹರ್ಷಗುಪ್ತ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ವಿಚಾರಣೆ ಸಂಧರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಎಸ್ ಓಕಾ ಅವರು ಐಎಂಎ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆರಂಭವಾಗಿದೆಯೇ ಎಂದು ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವಡಗಿಯನ್ನು ‌ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ನಾವಾಡಗಿ ತನಿಖೆ ಇನ್ನು ಆರಂಭವಾಗಿಲ್ಲ. ಕೇಂದ್ರ ಸರ್ಕಾರದ ಅಧಿಸೂಚನೆಗೆ ಕಾಯಲಾಗುತ್ತಿದೆ ಎಂದು ತಿಳಿಸಿದರು.

ಈ ಹಿನ್ನಲೆ ಮುಖ್ಯ ನ್ಯಾಯಮೂರ್ತಿ ಕೇಂದ್ರ ಸರಕಾರಕ್ಕೆ ತಕ್ಷಣವೇ ಸಿಬಿಐ ತನಿಖೆ ನಡೆಸುವಂತೆ ಅಧಿಸೂಚನೆ ಹೊರಡಿಸಬೆಕೆಂದು ನಿರ್ದೇಶನ ನೀಡಿದರು. ಸಿಬಿಐ ತನಿಖೆ ಆರಂಭಿಸುವ ತನಕ ಎಸ್ಐಟಿ ವಿಚಾರಣೆ ನಡೆಸಬಹುದೆಂದು ತಿಳಿಸಿ, ಸೆಪ್ಟೆಂಬರ್ 31ಕ್ಕೆ ವಿಚಾರಣೆ ಮುಂದೂಡಿದರು.

Last Updated : Aug 28, 2019, 6:36 PM IST

ABOUT THE AUTHOR

...view details