ಕರ್ನಾಟಕ

karnataka

ETV Bharat / state

ಐಎಂಎ ಪ್ರಕರಣ: ಬಿಡಿಎ ಇಂಜಿನಿಯರ್ ವಿರುದ್ಧ FIR ದಾಖಲಿಸಿದ ಸಿಬಿಐ

ಐಎಂಎ ಪ್ರಕರಣದಲ್ಲಿ ಭಾಗಿಯಾದ ಬಿಡಿಎ ಇಂಜಿನಿಯರ್ ಕುಮಾರ್ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಐಎಂಎ ಪ್ರಕರಣ: ಬಿಡಿಎ ಇಂಜಿನಿಯರ್ ಮೇಲೆ ಎಫ್​ಐಆರ್ ದಾಖಲಿಸಿದ ಸಿಬಿಐ

By

Published : Sep 5, 2019, 11:14 AM IST

ಬೆಂಗಳೂರು: ಐಎಂಎ ಪ್ರಕರಣದ ಬಗ್ಗೆ ತನಿಖೆ ಚುರುಕುಗೊಳಿಸಿದಕೇಂದ್ರ ತನಿಖಾ ದಳ ಬಿಡಿಎ ಇಂಜಿನಿಯರ್ ಕುಮಾರ್ ವಿರುದ್ಧ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿಕೊಂಡಿದೆ.

ಐಎಂಎ ಕಂಪನಿ ಮಾಲೀಕ‌ ಮನ್ಸೂರ್‌ನಿಂದ ಬಿಡಿಎ ಇಂಜಿನಿಯರ್ ಕುಮಾರ್‌ 5 ಕೋಟಿ ರೂ ಹಣವನ್ನು ಅಕ್ರಮವಾಗಿ ಪಡೆದಿರುವ ವಿಚಾರ ಎಸ್ಐಟಿ ತನಿಖೆ ವೇಳೆ ಗೊತ್ತಾಗಿತ್ತು. ಈ ಆಧಾರದ ಮೇಲೆ ಕುಮಾರ್ ಮನೆ ಶೋಧ ನಡೆಸಿ‌ದ್ದ ತನಿಖಾಧಿಕಾರಿಗಳು ಪ್ರಕರಣ ಸಂಬಂಧ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಐಎಂಎ ಪ್ರಕರಣದ ಗಂಭೀರತೆ ಅರಿತಿರುವ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ 30 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದೀಗ ಬಿಡಿಎ ಎಂಜಿನಿಯರ್‌ ವಿರುದ್ಧ ಕೇಸ್ ದಾಖಲಿಸಲಾಗಿದೆ.

ABOUT THE AUTHOR

...view details