ಬೆಂಗಳೂರು: ಹೊಸಕೋಟೆ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಸಮಾವೇಶ ನಡೆಸುವ ಹಿನ್ನೆಲೆ ಕೈ ನಾಯಕರಿಗೆ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ.
ನಾನೂ ಎಲ್ಲದಕ್ಕೂ ಸಿದ್ಧವಾಗಿದ್ದೇನೆ.. ಕಾಂಗ್ರೆಸ್ ನಾಯಕರಿಗೆ ಎಂಟಿಬಿ ಟಾಂಗ್ - Nagaraju
ಯಾರು ಏನು ಭಾಷಣ ಮಾಡ್ತಾರೋ ಮಾಡ್ಲಿ, ಏನೂ ಆಗೋದಿಲ್ಲ. ನಾನೂ ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಮೊಟ್ಟ ಮೊದಲ ಬಾರಿಗೆ ನಮ್ಮ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಅವರು ಏನೇನು ಮಾತಾಡ್ತಾರೋ ನೋಡೋಣ. ನಂಗೆ ಯಾರ ಭಾಷಣದಿಂದಲೂ ಭಯವಿಲ್ಲ ಎಂದರು.
ಗರುಡಾಚಾರ್ ಪಾಳ್ಯದ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರು ಏನು ಭಾಷಣ ಮಾಡ್ತಾರೋ ಮಾಡ್ಲಿ, ಏನೂ ಆಗೋದಿಲ್ಲ. ನಾನೂ ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಮೊಟ್ಟ ಮೊದಲ ಬಾರಿಗೆ ನಮ್ಮ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಅವರು ಏನೇನು ಮಾತಾಡ್ತಾರೋ ನೋಡೋಣ. ನಂಗೆ ಯಾರ ಭಾಷಣದಿಂದಲೂ ಭಯವಿಲ್ಲ ಎಂದರು.
ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿದ ಎಂಟಿಬಿ, ಅವರಿಗೆ ನ್ಯಾಯ ಸಿಗುವ ಭರವಸೆಯಿದೆ. ದೇಶದಲ್ಲಿ ಎಲ್ಲರಿಗೂ ಕಾನೂನು ಒಂದೇ. ಬಹಳಷ್ಟು ಮಂದಿಗೆ ನ್ಯಾಯಾಲಯದಲ್ಲಿ ಬೇಲ್ ಸಿಕ್ಕಿದೆ, ಡಿ ಕೆ ಶಿವಕುಮಾರ್ ಅವರಿಗೂ ಬೇಲ್ ಸಿಗುವ ಮುನ್ಸೂಚನೆಯಿದೆ ಎಂದು ಹೇಳಿದರು.