ಬೆಂಗಳೂರು:ಪತ್ನಿಗೆ ಅಕ್ರಮ ಸಂಬಂಧವಿರಬಹುದು ಎಂದು ಶಂಕಿಸಿದ ಪತಿವೋರ್ವ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ. ಪತ್ನಿಯನ್ನ ಸಾಯಿಸಿ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಕ್ರಮ ಸಂಬಂಧ ಶಂಕೆ... ಪತ್ನಿ ಸಾಯಿಸಿ ಪತಿ ಮಾಡಿದ್ದೇನು ಗೊತ್ತಾ?! - wife killed for Illicit relationship reason
ಪತ್ನಿ ಅಕ್ರಮ ಸಂಬಂಧ ಹೊಂದಿರಬಹುದೆಂದು ಶಂಕಿಸಿ ಆಕೆಯನ್ನು ಕೊಂದು ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪತ್ನಿಯನ್ನು ಸಾಯಿಸಿ ಪತಿಯೂ ಆತ್ಮಹತ್ಯೆ
ತಮಿಳುನಾಡು ಮೂಲದವರಾಗಿದ್ದ ದಂಪತಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸವಾಗಿದ್ರು. ಮುರುಗೇಶ ಪ್ರತಿದಿನ ಪತ್ನಿ ಜೊತೆ ನಿನಗೆ ಯಾರೊಂದಿಗೋ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿ ಪ್ರತಿದಿನ ಗಲಾಟೆ ಮಾಡುತ್ತಿದ್ದ ಎನ್ನಲಾಗ್ತಿದೆ.
ಸೋಮವಾರ ಕೂಡ ಪುನಃ ಗಲಾಟೆ ಶುರು ಮಾಡಿದ್ದ ಮುರುಗೇಶ ಮೊದಲು ಪತ್ನಿಯನ್ನ ಕೊಲೆ ಮಾಡಿ ನಂತ್ರ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.