ಬೆಂಗಳೂರು :ಕಳ್ಳದಂಧೆಯಲ್ಲಿ ಎಣ್ಣೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಮಣಿ ಮತ್ತು ರಾಮು ಬಂಧಿತ ಆರೋಪಿಗಳು. ಇವರು ಮಿಲ್ಟ್ರಿ ಕ್ಯಾಂಟೀನ್, ಡ್ಯೂಟಿ ಫ್ರೀ ಶಾಪ್ಗಳಿಂದ ನೂರಾರು ಲೀಟರ್ ಎಣ್ಣೆಯನ್ನು ಖರೀದಿಸಿ ಹೊಸವರ್ಷಕ್ಕೆ ಪೂರೈಕೆ ಮಾಡಲು ಅನಧಿಕೃತವಾಗಿ ಶೇಖರಿಸಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಅಬಕಾರಿ ಡಿಸಿ ವೀರಣ್ಣ ಬಾಗೇವಾಡಿ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.