ಕರ್ನಾಟಕ

karnataka

ETV Bharat / state

'ಪುನೀತ ನಮನ' ಹೆಸರಲ್ಲಿ ಬೇಕಾಬಿಟ್ಟಿ ಚಂದಾ ವಸೂಲಿ: ಫಿಲ್ಮ್ ಚೇಂಬರ್ ವಿರುದ್ಧ ಆರೋಪ - ಪುನೀತ್ ನುಡಿನಮನ ಹೆಸರಲ್ಲಿ ಚಂದಾ ವಸೂಲಿ

ಫಿಲ್ಮ್ ಚೇಂಬರ್ 'ಪುನೀತ್ ನುಡಿನಮನ'ದ ಹೆಸರಲ್ಲಿ ಚಂದಾ ವಸೂಲಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

allegations
ಫಿಲ್ಮ್ ಚೇಂಬರ್

By

Published : Nov 7, 2021, 8:31 PM IST

ಬೆಂಗಳೂರು: ಫಿಲ್ಮ್ ಚೇಂಬರ್ 'ಪುನೀತ್ ನುಡಿನಮನ'ದ ಹೆಸರಲ್ಲಿ ಚಂದಾ ವಸೂಲಿ ಮಾಡುತ್ತಿದೆ ಎಂಬ ಆರೋಪಕ್ಕೆ ಗುರಿಯಾಗುತ್ತಿದೆ.

ನವೆಂಬರ್ 16ರಂದು ನಡೆಯಲಿರುವ ‘ಪುನೀತ ನಮನ’ ಕಾರ್ಯಕ್ರಮದ ಹೆಸರಲ್ಲಿ ಚಂದಾ ವಸೂಲಿ ಮಾಡುತ್ತಿದ್ದು, ಚೆಕ್ ಪಡೆದು, ವೈಯಕ್ತಿಕ ಅಕೌಂಟ್​ಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಜನಪ್ರಿಯ ನಟನಿಗೆ ನುಡಿನಮನ ಸಲ್ಲಿಸಲು ಫಿಲ್ಮ್ ಚೇಂಬರ್ ಬಳಿ ಹಣ ಇಲ್ಲದಿದ್ದರೆ ಸದಸ್ಯರೇ ಸೇರಿ ಹಣ ಕೊಡುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿನಿಮಾ ನಿರ್ದೇಶಕ ಜೆ.ಜೆ.ಶ್ರೀನಿವಾಸ್, ಕುಮಾರ್ ಸೇರಿದಂತೆ ಹಲವು ಫಿಲ್ಮ್ ಚೇಂಬರ್ ಸದಸ್ಯರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:ತೆಲುಗು ರಿಯಾಲಿಟಿ ಶೋನಲ್ಲಿ ಪುನೀತ್​ ರಾಜಕುಮಾರ್​ಗೆ ಶ್ರದ್ದಾಂಜಲಿ

ABOUT THE AUTHOR

...view details