ಆನೇಕಲ್: ರೈತರ ಜಮೀನು ಖರೀದಿ ಮಾಡಿದ ಕೆಲ ಬಂಡವಾಳಶಾಹಿಗಳು ಅಕ್ರಮವಾಗಿ ಬೋರ್ವೆಲ್ ಗಳನ್ನು ಕೊರೆಸಿ ಟ್ಯಾಂಕರ್ಗಳ ಮೂಲಕ ಅಕ್ರಮವಾಗಿ ನೀರು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಆನೇಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಕ್ರಮ ನೀರು ಮಾರಾಟ ದಂಧೆ: ಆನೇಕಲ್ನಲ್ಲಿ ಪ್ರತಿಭಟನೆ - ಅಕ್ರಮ ನೀರು ಮಾರಾಟ ದಂಧೆ: ಆನೇಕಲ್ನಲ್ಲಿ ಪ್ರತಿಭಟನೆ
ಅಕ್ರಮವಾಗಿ ಬೋರ್ವೆಲ್ಗಳನ್ನು ಕೊರೆಸಿ ಟ್ಯಾಂಕರ್ಗಳ ಮೂಲಕ ಅಕ್ರಮವಾಗಿ ನೀರು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಟ್ಯಾಂಕರ್ಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.
![ಅಕ್ರಮ ನೀರು ಮಾರಾಟ ದಂಧೆ: ಆನೇಕಲ್ನಲ್ಲಿ ಪ್ರತಿಭಟನೆ Protest in Anekal](https://etvbharatimages.akamaized.net/etvbharat/prod-images/768-512-6376691-thumbnail-3x2-net.jpg)
ಅಕ್ರಮ ನೀರು ಮಾರಾಟ ದಂಧೆ: ಆನೇಕಲ್ನಲ್ಲಿ ಪ್ರತಿಭಟನೆ
ಅಕ್ರಮ ನೀರು ಮಾರಾಟ ದಂಧೆ: ಆನೇಕಲ್ನಲ್ಲಿ ಪ್ರತಿಭಟನೆ
ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಗ್ರಾಮಸ್ಥರು ಟ್ಯಾಂಕರ್ಗಳನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಟ್ಯಾಂಕರ್ಗಳ ಮೂಲಕ ನೀರನ್ನು ಸರಬರಾಜು ಮಾಡುತ್ತಿರುವುದರಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜನರಿಗೆ, ರೈತರಿಗೆ ಕುಡಿಯಲು ನೀರಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಅಕ್ರಮವಾಗಿ ಪರವಾನಗಿ ಇಲ್ಲದೆ ನೀರು ಸರಬರಾಜು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.