ಕರ್ನಾಟಕ

karnataka

ETV Bharat / state

ಕಾಳಸಂತೆಯಲ್ಲಿ ರೆಮ್​ಡೆಸಿವಿರ್ ಮಾರಾಟ: ಸಿಸಿಬಿ ಪೊಲೀಸರಿಂದ 16 ಮಂದಿ ಅರೆಸ್ಟ್​​​ - ರೆಮ್ಡಿಸಿವಿರ್

ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ 55 ರೆಮ್​ಡೆಸಿವಿರ್ ಬಾಟಲ್​ಗಳನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದು, 16 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Illegal sale of remdecivir
ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ

By

Published : Apr 24, 2021, 10:33 PM IST

Updated : Apr 24, 2021, 10:51 PM IST

ಬೆಂಗಳೂರು: ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ರೆಮ್​ಡೆಸಿವಿರ್ 55 ಬಾಟಲ್​ಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡು 16 ಮಂದಿಯನ್ನು ಬಂಧಿಸಿದ್ದಾರೆ.

ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ

ರಾಜ್ಯದಲ್ಲಿ ರೆಮ್​​ಡೆಸಿವಿರ್​ ಚುಚ್ಚುಮದ್ದು ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಮೆಡಿಕಲ್ ಶಾಪ್‌ ಮಾಲೀಕರು ಕಾಳಸಂತೆಯಲ್ಲಿ ಅಕ್ರಮವಾಗಿ ರೆಮ್​ಡೆಸಿವಿರ್ ಮಾರಾಟ ಮಾಡುತ್ತಿದ್ದಾರೆ. ಈ ಚುಚ್ಚುಮದ್ದಿಗೆ 3 ಸಾವಿರ ರೂ. ಬೆಲೆ ಇದ್ದು, ಕಾಳಸಂತೆಯಲ್ಲಿ 11 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು.

ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ

ಪ್ರಕರಣದಲ್ಲಿ ಸಿಲಿಕಾನ್ ಮೆಡಿಕಲ್​ನ ಎಂ.ಡಿ.ಹುಜೇಫಾ, ಮತೀನ್, ಕಾರ್ತಿಕೇಯ ಮೆಡಿಕಲ್ ಔಷಧ ವಿತರಕ ಕೆ.ಪಿ.ಸುಮನ್, ವೆಂಕಟೇಶ್ವರ ಮೆಡಿಕಲ್​ನ ಪ್ರಕಾಶ್ ಸೇರಿ 16 ಜನರನ್ನು ಬಂಧಿಸಲಾಗಿದೆ. ಕಾಳಸಂತೆಯಲ್ಲಿ ರೆಮ್​ಡೆಸಿವಿರ್ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಲು ವಿಶೇಷ ತಂಡ ರಚಿಸಲಾಗಿದೆ. ಈವರೆಗೆ 6 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಜಾಲದಲ್ಲಿ ಯಾರಿದ್ದಾರೆ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾತ್ತದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ
Last Updated : Apr 24, 2021, 10:51 PM IST

ABOUT THE AUTHOR

...view details