ಬೆಂಗಳೂರು:ಅಕ್ರಮವಾಗಿ ಉಡ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊರಮಂಗಲ ಇನ್ಸ್ ಪೆಕ್ಟರ್ ಶಶಿಧರ್ ಮತ್ತು ತಂಡ ಯಶಸ್ವಿಯಾಗಿದೆ.
ಬೆಂಗಳೂರಿನಲ್ಲಿ ಅಕ್ರಮ ಉಡ ಮಾರಾಟಗಾರರ ಬಂಧನ - Bengaluru police arrested Illegal Monitor lizard sellers
ರಾಜಸ್ಥಾನದ ಮರಳುಗಾಡಿನಿಂದ ಉಡಗಳನ್ನು ಹಿಡಿದು, ಅಕ್ರಮ ಸಾಗಾಣಿಕೆ ಮಾಡಿ ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ವಶಪಡಿಸಿಕೊಂಡ ಉಡಾಗಳು
ವಶಪಡಿಸಿಕೊಂಡ ಉಡಾಗಳು
ಅಶೋಕನ್, ಮಲ್ಲರಾಜ, ಗೋಪಿ, ಕರ್ಣ, ಐವತ್ತರೆಡ್ಡಿ ಬಂಧಿತರು. ಇವರು ರಾಜಸ್ಥಾನದ ಮರಳುಗಾಡಿನಿಂದ ಉಡಗಳನ್ನು ಹಿಡಿದು, ಅಕ್ರಮ ಸಾಗಾಣಿಕೆ ಮಾಡಿ ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕೋರಮಂಗಲ ಪೊಲೀಸರು, ಅರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ10 ಉಡಗಳನ್ನು ರಕ್ಷಿಸಿದ್ದಾರೆ. ಬಂಧಿತ ಆರೋಪಿಗಳು ಹಕ್ಕಿ ಪಿಕ್ಕಿ ಜನಾಂಗಕ್ಕೆ ಸೇರಿದವರಾಗಿದ್ದಾರೆ.