ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆ ಬಾರ್ಗಳು ಬಾಗಿಲು ಹಾಕಿದ ಕಾರಣ ಕುಡುಕರಿಗೆ ಎಣ್ಣೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಖದೀಮರು ಭಾರತ ಲಾಕ್ಡೌನ್ ವೇಳೆ ರಾಜಾರೊಷವಾಗಿ ಕಳ್ಳ ಬಟ್ಟಿ ಸಾರಾಯಿ ಹಾವಳಿ ರಾಜ್ಯದಲ್ಲಿ ಮತ್ತೆ ಚುರುಕುಗೊಂಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ತಯಾರಿಸಲಾಗ್ತಿದ್ದ ಕಳ್ಳ ಬಟ್ಟಿ ಸಾರಾಯಿ ಮೇಲೆ ಅಬಕಾರಿ ಇಲಾಖೆ ಕೆಲವೆಡೆ ದಾಳಿ ನಡೆಸಿದೆ.
ರಾಜ್ಯದಲ್ಲಿ ಮತ್ತೆ ತಲೆ ಎತ್ತಿದ ಕಳ್ಳ ಬಟ್ಟಿ ಸಾರಾಯಿ ದಂಧೆ - ಮದ್ಯದ ಅಂಗಡಿ ಕ್ಲೋಸ್
ಮದ್ಯದ ಅಂಗಡಿ ಕ್ಲೋಸ್ ಮಾಡಿರೋದನ್ನ ಬಂಡವಾಳ ಮಾಡಿಕೊಂಡ ದಂಧೆಕೋರರು ಕಳ್ಳ ಬಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕೆಲವೆಡೆ ಅಬಕಾರಿ ಇಲಾಖೆ ದಾಳಿ ನಡೆಸಿದೆ.
ಮದ್ಯದ ಅಂಗಡಿ ಕ್ಲೋಸ್ ಮಾಡಿರೋದನ್ನ ಬಂಡವಾಳ ಮಾಡಿಕೊಂಡ ದಂಧೆಕೋರರು ಕೋಲಾರ, ಬೆಂಗಳೂರು ಗ್ರಾಮಾಂತರ, ಹಾವೇರಿ, ಬಾಗಲಕೋಟೆ ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಜನಸಂದಣಿ ಕಡಿಮೆ ಇರುವ ಪ್ರದೇಶದಲ್ಲಿ ಸಾರಾಯಿ ತಯಾರಿ ಮಾಡಿ ಸಿಲಿಕಾನ್ ಸಿಟಿ ಸೇರಿದಂತೆ ಹಲವೆಡೆ ಅಬಕಾರಿ ಇಲಾಖೆ, ಹಾಗೂ ಪೊಲೀಸರ ಕಣ್ತಪ್ಪಿಸಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ರಾಜ್ಯ ಅಬಕಾರಿ ಇಲಾಖೆ ದಾಳಿ ಮಾಡಿ ಅಕ್ರಮ ಕಳ್ಳ ಬಟ್ಟಿ ಸಾರಾಯಿ ಮಾರಾಟ ಮಾಡುವವರನ್ನ ಬಂಧಿಸಿದ್ದಾರೆ.
ಹಲವು ವರ್ಷಗಳಿಂದ ಕಳ್ಳ ಬಟ್ಟಿ ಸಾರಾಯಿ ದಂಧೆ ನಿಂತಿತ್ತು. ಯಾಕಂದ್ರೆ ಅಕ್ರಮ ಸಾರಾಯಿ ಕುಡಿದು ಕೆಲವರು ಸಾವನ್ನಪ್ಪಿರುವ ಘಟನೆಗಳು ಬಹಳಷ್ಟು ಬೆಳಕಿಗೆ ಬಂದಿದ್ದವು. ಇದೀಗ ಕೊರೊನಾ ಸಮಯದಲ್ಲಿ ಅಕ್ರಮ ಸಾರಾಯಿ ತಯಾರಿ ಮಾಡ್ತಿದ್ದಾರೆ. ಸದ್ಯ ಖದೀಮರನ್ನ ಹೆಡೆಮುರಿ ಕಟ್ಟಿ ಲಕ್ಷಾಂತರ ಮೌಲ್ಯದ ಸಾರಾಯಿ ವಶಪಡಿಸಿ ತನಿಖೆ ಮುಂದುವರೆಸಿದ್ದಾರೆ.