ಕರ್ನಾಟಕ

karnataka

ETV Bharat / state

ಸ್ಪೋರ್ಟ್ಸ್ ಬ್ರಾದಲ್ಲಿ ಬಚ್ಚಿಟ್ಟು ಅಕ್ರಮ ಚಿನ್ನ ಸಾಗಾಟ: ಕಸ್ಟಮ್ಸ್ ಬಲೆಗೆ ಬಿದ್ದ ಮಹಿಳೆ - ಈಟಿವಿ ಭಾರತ ಕನ್ನಡ

ಸ್ಪೋರ್ಟ್ಸ್ ಬ್ರಾದಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಬೆಂಗಳೂರು ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ.

illegal-gold-smuggling-concealed-in-sports-bra
ಸ್ಪೋರ್ಟ್ಸ್ ಬ್ರಾದಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ : ಕಸ್ಟಮ್ಸ್ ಬಲೆಗೆ ಬಿದ್ದ ಮಹಿಳಾ ಪ್ರಯಾಣಿಕೆ

By

Published : Oct 20, 2022, 6:42 PM IST

ದೇವನಹಳ್ಳಿ: ಸ್ಪೋರ್ಟ್ಸ್ ಬ್ರಾದ ಪ್ಯಾಡ್‌ನಲ್ಲಿ ಬಚ್ಚಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಸೀಮಾ ಸುಂಕ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 17 ಲಕ್ಷ ರೂ ಮೌಲ್ಯದ 348 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಅ.8ರ ಬೆಳಿಗ್ಗೆ ಎಮಿರೇಟ್ಸ್ ಏರ್ ಲೈನ್ಸ್‌ನ EK564 ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳೆ ಬಂದಿಳಿದ್ದಳು. ಆಕೆ ನಡೆದುಕೊಂಡು ಬರುತ್ತಿದ್ದ ಭಂಗಿ ಮತ್ತು ಧರಿಸಿದ್ದ ಒಳಉಡುಪು ಅಸಹಜವಾಗಿ ಕಂಡು ಬಂದಿತ್ತು. ಈ ಬಗ್ಗೆ ಕಸ್ಟಮ್ಸ್‌ನ ಮಹಿಳಾ ಅಧಿಕಾರಿಗಳು ಅನುಮಾನಗೊಂಡು ಆಕೆಯನ್ನು ತಡೆದು ವಿಚಾರಣೆ ನಡೆಸಿದ್ದಾರೆ.

ತಕ್ಷಣ ಆಕೆಯನ್ನು ವಶಕ್ಕೆ ಪಡೆದ ಮಹಿಳಾ ಅಧಿಕಾರಿಗಳು ಧರಿಸಿದ್ದ ಒಳ ಉಡುಪು ತೆಗೆಯುವಂತೆ ಸೂಚಿಸಿದ್ದಾರೆ. ಈ ಸಂದರ್ಭ ಸ್ಪೋರ್ಟ್ಸ್ ಬ್ರಾದೊಳಗಡೆ ಇದ್ದ ಪ್ಯಾಡ್‌ನಲ್ಲಿ ಚಿನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಈಕೆಯಿಂದ ಸುಮಾರು 17,53,630 ಮೌಲ್ಯದ 348 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:ಡ್ರಗ್ಸ್​​ ದಂಧೆಯಲ್ಲಿ ರೈಲ್ವೆ ಹೊರಗುತ್ತಿಗೆ ನೌಕರರು ಭಾಗಿ!: ರೈಲು ಮುಖಾಂತರವೇ ಪೂರೈಕೆ

ABOUT THE AUTHOR

...view details