ಕರ್ನಾಟಕ

karnataka

ETV Bharat / state

80 ಲಕ್ಷ ಮೌಲ್ಯದ ವಜ್ರದ ಹರಳು ಅಕ್ರಮ ಸಾಗಣೆ: ಬೆಂಗಳೂರಲ್ಲಿ ಸಿಕ್ಕಿಬಿದ್ದ ಖದೀಮರು - ಅಕ್ರಮವಾಗಿ ವಜ್ರದ ಹರಳು ಸಾಗಣೆ

ಸಿಟಿ ಮಾರ್ಕೆಟ್ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ವಜ್ರದ ಹರಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿರುವುದು ತಿಳಿದಿದೆ. ಸದ್ಯ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

Illegal diamond trafficking: Three persons detained by police
ಅಕ್ರಮವಾಗಿ ವಜ್ರದ ಹರಳು ಸಾಗಾಟ: ಮೂವರು ಪೊಲೀಸರ ವಶಕ್ಕೆ

By

Published : Sep 2, 2020, 3:33 PM IST

ಬೆಂಗಳೂರು: ವಜ್ರದ ಹರಳುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯುವಲ್ಲಿ ಸಿಟಿ ಮಾರ್ಕೆಟ್​ ಪೊಲೀಸರು ಯಶಸ್ವಿಯಾಗಿದ್ದಾರೆ. ರವಿ ಕುಮಾರ್, ಪ್ರವೀಣ್ ಕುಮಾರ್, ಸುಧೀರ್ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಸಿಟಿ ಮಾರ್ಕೆಟ್​​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಹೀಗಾಗಿ ಇನ್ಸ್​​ಪೆಕ್ಟರ್​ ಕುಮಾರಸ್ವಾಮಿ ನೇತೃತ್ವದ ತಂಡ ಆರೋಪಿಗಳನ್ನು ಮೊದಲು ವಶಕ್ಕೆ ಪಡೆದಿದ್ದಾರೆ. ನಂತರ ಪರಿಶೀಲನೆ ಮಾಡಿದಾಗ ಕೆಂಪು ಬಣ್ಣದ ಪರ್ಸ್​​​ನಲ್ಲಿ 80 ವಜ್ರದಂತಹ ಹರಳು ಪತ್ತೆಯಾಗಿವೆ.

ವಜ್ರದ ಹರಳು ಮಾರಾಟಕ್ಕೆ ಯತ್ನಿಸಿದ ಖದೀಮರು ಅಂದರ್​

ಹೀಗಾಗಿ ವಿಚಾರಣೆ ನಡೆಸಿದಾಗ ಅಕ್ರಮವಾಗಿ ವಜ್ರದ ಹರಳು ಸಾಗಿಸುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಭರಣ ತಯಾರಿಸುವ ತಜ್ಞರನ್ನು ಕರೆಯಿಸಿ ಪರಿಶೀಲನೆ ಮಾಡಿದಾಗ ಕಚ್ಚಾ ವಜ್ರದ ಹರಳುಗಳೆಂದು ಮಾಹಿತಿ ಸಿಕ್ಕಿದೆ. ಇವು ಸುಮಾರು 40,00,000 ಬೆಲೆಬಾಳುವ ವಜ್ರದ ಹರಳಾಗಿದ್ದು, ಇದನ್ನು ಆರೋಪಿಗಳು ಕಳ್ಳತನ ಮಾಡಿ ಅಂಚೆ ಪೇಟೆ ಚಿನ್ನದ ಆಭರಣ ತಯಾರಿಸುವವರಿಗೆ ಮಾರಾಟ ಮಾಡಲು ಬಂದಿರುವ ವಿಚಾರ ಗೊತ್ತಾಗಿದೆ‌.

ಸದ್ಯ ಆರೋಪಿಗಳ ವಿರುದ್ಧ ಸಿಆರ್​​ಪಿಸಿ ಹಾಗೂ ಐಪಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details