ಕರ್ನಾಟಕ

karnataka

ETV Bharat / state

ಬಡ್ಡಿ ಆಸೆ ತೋರಿಸಿ 2 ಕೋಟಿ ರೂ.ವಂಚನೆ ಕೇಸ್‌; ಇಕ್ರ ಕಂಪನಿಯ ನಾಲ್ವರು ಆರೋಪಿಗಳ ಬಂಧನ - ಬೆಂಗಳೂರು

ಹೂಡಿಕೆ ಹಣಕ್ಕೆ ಅಧಿಕ ಬಡ್ಡಿ ಹಾಗೂ ಲಾಭಾಂಶ ಆಸೆ ತೋರಿಸಿ ಸುಮಾರು 40 ಜನರಿಗೆ 2 ಕೋಟಿ ರೂ. ವಂಚನೆ ಮಾಡಿದ್ದ ಇಕ್ರ ವೆಲ್ತ್ ಮ್ಯಾನೇಜ್ಮೆಂಟ್ ಕಂಪನಿಯ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ತಿಲಕ್‌ ನಗರ ಪೊಲೀಸರು ಬಂಧಿಸಿದ್ದಾರೆ.

ikra cheating case; 4 accused arrested by tilaknagar  police in bangalore
ಬಡ್ಡಿ ಆಸೆ ತೋರಿಸಿ 2 ಕೋಟಿ ರೂ.ವಂಚನೆ ಕೇಸ್‌; ಇಕ್ರ ಕಂಪನಿಯ ನಾಲ್ವರು ಆರೋಪಿಗಳ ಬಂಧನ

By

Published : Sep 11, 2021, 11:14 PM IST

ಬೆಂಗಳೂರು: ಇಕ್ರ ವೆಲ್ತ್ ಮ್ಯಾನೇಜ್ಮೆಂಟ್ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಲಕ್ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಹೂಡಿಕೆ ಹಣಕ್ಕೆ ಅಧಿಕ ಬಡ್ಡಿ ಮತ್ತು ಲಾಭಾಂಶ ನೀಡುವುದಾಗಿ ಆಶ್ವಾಸನೆ ಕೊಟ್ಟು ಸುಮಾರು 40 ಜನರಿಗೆ 2 ಕೋಟಿ ರೂ. ವಂಚನೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಸಂಬಂಧ ತಿಲಕ್ ನಗರ ಪೊಲೀಸರು ಅಬ್ದುಲ್ ನಜೀಮ್, ಹಿದಾಯತ್ ಉಲ್ಲಾ, ನಜೀಮ್, ಅಲಿಂ ಎಂಬುವವರನ್ನು ಬಂಧಿಸಿ ವಿಚಾರಣೆ ನೆಡೆಸುತ್ತಿದ್ದಾರೆ. ಆರೋಪಿಗಳು ತಿಲಕ್ ನಗರ ನಿವಾಸಿಯೊಬ್ಬರ ಬಳಿಯಲ್ಲಿ 10 ಲಕ್ಷ ಮತ್ತು ಸ್ನೇಹಿತರ ಬಳಿ 5 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ನಾಲ್ವರು ಅರೋಪಿಗಳ ವಿರುದ್ಧ 2019 ಬಡ್ಸ್ ಆಕ್ಟ್ ಸೆಕ್ಷನ್ 21, ಕೆಪಿಐಡಿ ಆಕ್ಟ್ ಸೆಕ್ಷನ್ 9 ಹಾಗೂ ಐಪಿಸಿ 506, 420 ಅಡಿ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ABOUT THE AUTHOR

...view details