ಬೆಂಗಳೂರು:ಪ್ರಾಜೆಕ್ಟ್ ಪ್ರಾಣ (ಸಂಸ್ಕೃತದಲ್ಲಿ ಉಸಿರು ಅಥವಾ ಜೀವ) ಎಂಬ ಹೆಸರನ್ನು ಕೃತಕ ಉಸಿರಾಟದ ಯಂತ್ರಕ್ಕಿಟ್ಟು, ಐಐಎಸ್ಸಿ ವಿಜ್ಞಾನಿಗಳು ಈಗ ಅದರ ಮೂಲ ಮಾದರಿಯನ್ನು ಪರಿಚಯಿಸಿದ್ದಾರೆ.
ಕೋವಿಡ್-19 ದುಷ್ಪರಿಣಾಮದಿಂದಾಗಿ ನ್ಯೂಮೋನಿಯಾ ಉಂಟಾಗುವ ಸಾಧ್ಯತೆ ಇರುವುದರಿಂದ ಮಾರ್ಚ್ 2020ರ ಕೊನೆಯಲ್ಲಿ ಕೃತಕ ಉಸಿರಾಟ ಯಂತ್ರ (ventilator) ತಯಾರು ಮಾಡಲು ಐಐಎಸ್ಸಿ ವಿಜ್ಞಾನಿಗಳು ನಿರ್ಧರಿಸಿದ್ದರು. ಭಾರತ ವಿಜ್ಞಾನ ಲೋಕದ ಮುಕುಟಮಣಿ ಎಂದು ಕರೆಸಿಕೊಳ್ಳುವ ಐಐಎಸ್ಸಿ ವಿಜ್ಞಾನಿಗಳು ಸುಮಾರು 1 ತಿಂಗಳಲ್ಲಿ ಕಡಿಮೆ ವೆಚ್ಚದ ವೆಂಟಿಲೇಟರ್ನ ಮೂಲ ಮಾದರಿಯನ್ನು ಪರಿಚಯಿಸಿದ್ದಾರೆ.