ಕರ್ನಾಟಕ

karnataka

ETV Bharat / state

ಔಷಧೀಯ ಗುಣ ಹೊಂದಿರುವ ಚೆಂಡು ಹೂವಿನ ನೂತನ ತಳಿ ಬಿಡುಗಡೆ: ಬೆಳೆಗಾರರಿಗೆ ಬಂಪರ್ ಸುದ್ದಿ ​

ಐಐಹೆಚ್​ಆರ್ ವಿಜ್ಞಾನಿಗಳು ಔಷಧೀಯ ಗುಣ ಹೊಂದಿರುವ ಚೆಂಡು ಹೂವಿನ ತಳಿಗಳಾದ ಅರ್ಕಾ ಶುಭಾ ಮತ್ತು ಅರ್ಕಾ ವಿಭಾ ಬಿಡುಗಡೆ ಮಾಡಿದ್ದಾರೆ. ಅರ್ಕಾ ಶುಭಾದಲ್ಲಿ ಔಷಧಿಗಳ ಗುಣದ ಕೆರೋಟಿನ್ ಅಂಶ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

iihr scientists inventions of new breed marigold
ಐಐಹೆಚ್​ಆರ್ ವಿಜ್ಞಾನಿಗಳಿಂದ ಚೆಂಡು ಹೂವಿನ ನೂತನ ತಳಿ ಬಿಡುಗಡೆ..

By

Published : Feb 11, 2021, 12:45 PM IST

ಬೆಂಗಳೂರು:ಔಷಧಿಗಳ ಗುಣ ಹೊಂದಿರುವ ಚೆಂಡು ಹೂವಿನ ತಳಿಗಳಾದ ಅರ್ಕಾ ಶುಭಾ ಮತ್ತು ಅರ್ಕಾ ವಿಭಾ ರೈತರಿಗೆ ಕಲ್ಪವೃಕ್ಷವಾಗಲಿವೆ. ಚೆಂಡು ಹೂವಿನ ನೂತನ ತಳಿಗಳನ್ನ ಐಐಹೆಚ್​ಆರ್ ವಿಜ್ಞಾನಿಗಳು ಬಿಡುಗಡೆ ಮಾಡಿದ್ದು, ಸದ್ಯ ರೈತರ ಪಾಲಿಗೆ ಚೆಂಡು ಹೂ ವಾಣಿಜ್ಯ ಬೆಳೆಯಾಗಿದೆ.

ಕೀಟಗಳ ನಿಯಂತ್ರಣಕ್ಕೆ ಬೆಳೆಗಳ ನಡುವೆ ಸಾಲುಗಲ್ಲಿ ಚೆಂಡು ಹೂವನ್ನು ಬೆಳೆಯಲಾಗುತ್ತದೆ. ಹಬ್ಬ ಹರಿ-ದಿನಗಳಲ್ಲಿ ಹೂವುಗಳಿಗೆ ಬೇಡಿಕೆ ಇರುವುದರಿಂದ ಚೆಂಡು ಹೂವನ್ನು ರೈತರು ಬೆಳೆಯುತ್ತಾರೆ. ಅನಂತರ ಚೆಂಡು ಹೂಗಳಿಗೆ ಬೇಡಿಕೆ ಇರುವುದಿಲ್ಲ.

ಐಐಹೆಚ್​ಆರ್ ವಿಜ್ಞಾನಿಗಳಿಂದ ಚೆಂಡು ಹೂವಿನ ನೂತನ ತಳಿ ಬಿಡುಗಡೆ..

ವರ್ಷದ ಎಲ್ಲಾ ದಿನಗಳಲ್ಲಿಯೂ ಬೆಳೆಯುವ ಚೆಂಡು ಹೂವಿಗೆ ವರ್ಷದ ಎಲ್ಲಾ ದಿನದಲ್ಲೂ ಬೇಡಿಕೆ ಇರುವ ನೂತನ ತಳಿಗಳನ್ನ ಐಐಹೆಚ್​​ಆರ್ ವಿಜ್ಞಾನಿಗಳು ಬಿಡುಗಡೆ ಮಾಡಿದ್ದಾರೆ. ಔಷಧಿಗಳ ಗುಣ ಹೊಂದಿರುವ ಚೆಂಡು ಹೂವಿನ ತಳಿಗಳಾದ ಅರ್ಕಾ ಶುಭಾ ಮತ್ತು ಅರ್ಕಾ ವಿಭಾ ಬಿಡುಗಡೆ ಮಾಡಿದ್ದಾರೆ.

ಅರ್ಕಾ ಶುಭಾದಲ್ಲಿ ಔಷಧಿಗಳ ಗುಣದ ಕೆರೋಟಿನ್ ಅಂಶ ಇದೆ. ಸಾಮಾನ್ಯ ಚೆಂಡು ಹೂವಿನಲ್ಲಿ ಕೆರೋಟಿನ್ ಅಂಶ 1.4 ರಷ್ಟು ಇರುತ್ತದೆ. ಆದರೆ ಅರ್ಕಾ ಶುಭಾ ಮತ್ತು ಅರ್ಕಾ ವಿಭಾದಲ್ಲಿ 2.8 ರಿಂದ 3.2ರಷ್ಟು ಕೆರೋಟಿನ್ ಅಂಶ ಇರುತ್ತದೆ.

ಚೆಂಡು ಹೂವಿನಿಂದ ಕೆರೋಟಿನ್ ಅಂಶ ತೆಗೆದು ಔಷಧಿಗಳ ತಯಾರಿಕೆಗೆ ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಕೆರೋಟಿನ್ ಅಂಶವನ್ನು ಹೃದಯ ಸಂಬಂಧಿ ಖಾಯಿಲೆಗಳಿಗೆ ಔಷಧಿಯನ್ನಾಗಿ ಬಳಸಲಾಗುತ್ತದೆ. ಅಲ್ಲದೇ ಚೆಂಡು ಹೂವಿನಲ್ಲಿರುವ ಲುಟಿನ್ ಎಂಬ ಅಂಶವು ಕಣ್ಣಿನ ಚಿಕಿತ್ಸೆಗೆ ಬಳಕೆಯಾಗುವ ಔಷಧಿಯಲ್ಲಿ ಬಳಕೆಯಾಗುತ್ತೆ.

ಕುಕ್ಕಟೋದ್ಯಮದಲ್ಲಿ ಕೆರೋಟಿನ್ ಅಂಶವನ್ನು ಆಹಾರವಾಗಿ ಬಳಸಲಾಗುತ್ತದೆ. ಕೋಳಿ ಮಾಂಸ ಮತ್ತು ಮೊಟ್ಟೆಗೆ ಬಣ್ಣ ಬರಲು ಕೆರೋಟಿನ್ ಅಂಶ ಸಹಕಾರಿಯಾಗಿದೆ.

ABOUT THE AUTHOR

...view details