ಬೆಂಗಳೂರು:ಮೆಣಸಿನಕಾಯಿ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ, ಎಲೆ ಮುಟುರು ರೋಗದಿಂದ ಮೆಣಸಿನಕಾಯಿ ಬೆಳೆಗಾರರು ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಐಐಹೆಚ್ಆರ್ ಎಲೆ ಮುಟುರು ರೋಗ ನಿಯಂತ್ರಿಸುವ ಮತ್ತು ಅಧಿಕ ಇಳುವರಿ ನೀಡುವ 5 ಹೈಬ್ರೀಡ್ ಮೆಣಸಿನಕಾಯಿ ತಳಿಗಳನ್ನ ಅಭಿವೃದ್ಧಿ ಪಡಿಸಿದೆ.
ಭಾರತದಲ್ಲಿ 2 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು. ಪ್ರತಿವರ್ಷ ಮೆಣಸಿನಕಾಯಿ ರಫ್ತುನಿಂದ ಭಾರತಕ್ಕೆ 6 ಸಾವಿರ ಕೋಟಿ ಆದಾಯ ಬರುತ್ತಿದೆ, ದೇಶದಲ್ಲಿ ಮೆಣಸಿನಕಾಯಿ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ.
ಮೆಣಸಿನ ಕಾಯಿ ಖಾರ, ಗಾತ್ರ, ಆಕಾರಗಳ ಆಧಾರದ ಮೇಲೆ ವಿವಿಧ ಮೆಣಸಿನಕಾಯಿ ಇದೆ. ಮುಖ್ಯವಾಗಿ ಮೆಣಸಿನಕಾಯಿ ಬಣ್ಣ ಮತ್ತು ಖಾರದ ಪ್ರಮಾಣದ ಮೇಲೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತೆ. ಆದರೆ, ಎಲೆಮುಟುರು ರೋಗಕ್ಕೆ ಮೆಣಸಿನಕಾಯಿ ಬೆಳೆ ತುತ್ತಾಗುತ್ತೆ. ವೈರಸ್ ಮೂಲಕ ಹರಡುವ ಈ ರೋಗದಿಂದ ಈ ಬೆಳೆಯೇ ಒಣಗಲಿದೆ. ಇದರಿಂದ ಮೆಣಸಿನಕಾಯಿ ಬೆಳೆಯುವ ರೈತರಿಗೆ ಆತಂಕವಿದೆ. ಇದರ ಬಗ್ಗೆ ಅಧ್ಯಯನ ನಡೆಸಿದ ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆ 8 ವರ್ಷಗಳ ಸಂಶೋಧನೆಯ ಫಲವಾಗಿ 5 ವಿವಿಧ ಹೈಬ್ರಿಡ್ ತಳಿಗಳನ್ನ ಅಭಿವೃದ್ಧಿಪಡಿಸಿದೆ.