ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಐಎಫ್ಎಸ್ ಅಧಿಕಾರಿ ಆತ್ಮಹತ್ಯೆ...! - sucide in Banglore

ಐಎಫ್ಎಸ್ ಅಧಿಕಾರಿವೋರ್ವರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಐಎಫ್ಎಸ್ ಆಧಿಕಾರಿ ಆತ್ಮಹತ್ಯೆ..

By

Published : Sep 8, 2019, 3:03 PM IST

Updated : Sep 8, 2019, 3:09 PM IST

ಬೆಂಗಳೂರು: ಯಲಹಂಕ ನ್ಯೂಟೌನ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಐಎಫ್ಎಸ್ ಅಧಿಕಾರಿವೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಪರ ಮುಖ್ಯ ಅರಣ್ಯ ಸಂರಕ್ಷಣಾ ‌ಅಧಿಕಾರಿಯಾಗಿ‌ ಸೇವೆ ಸಲ್ಲಿಸುತ್ತಿದ್ದ ಅವತಾರ್ ಸಿಂಗ್ ಆತ್ಮಹತ್ಯೆಗೆ ಶರಣಾದವರು. ಒಂದು ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಅರಣ್ಯ ಭವನಕ್ಕೆ ವರ್ಗಾವಣೆಯಾಗಿದ್ದ ಅವತಾರ್ ಸಿಂಗ್​, ಮೂಲತಃ ಹರಿಯಾಣದವಾರಾಗಿದ್ದು, ಕೋಲಾರದಿಂದ ಕೆಲಸ ಪ್ರಾರಂಭಿಸಿದ್ದರು ಎಂದು ತಿಳಿದುಬಂದಿದೆ.

ಇಂದು‌ ಬೆಳಗ್ಗೆ ವಾಕಿಂಗ್ ಹೋಗಿ ಬಂದು ಬೆಂಗಳೂರಿನ ಯಲಹಂಕದಲ್ಲಿರುವ ಖಾಸಗಿ ಅಪಾರ್ಟ್​ಮೆಂಟ್​ನ‌ಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆಯಷ್ಟೇ ಅರಣ್ಯ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವತಾರ್​ ಸಿಂಗ್​ ಪಾಲ್ಗೊಂಡಿದ್ದರು. ಅಲ್ಲದೆ, ವಿಕಾಸಸೌಧದಲ್ಲಿ ನಡೆದಿದ್ದ ಸಭೆಗೂ ಹಾಜರಾಗಿದ್ದರು.

ಅನಾರೋಗ್ಯ ಸಂಬಂಧ ಐಎಫ್​ಎಸ್​ ಅಧಿಕಾರಿ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗ್ತಿದೆಯಾದರೂ ಈ ಬಗ್ಗೆ ನಿಖರ ಮಾಹಿತಿ ಇಲ್ಲ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Sep 8, 2019, 3:09 PM IST

ABOUT THE AUTHOR

...view details