ಬೆಂಗಳೂರು:ರಸಗೊಬ್ಬರ ಮಾರಾಟ ದರದಲ್ಲಿ ಇಳಿಕೆ ಮಾಡುವ ಮೂಲಕ ಐಎಫ್‌ಎಫ್‌ಸಿಒ(ಇಫ್ಕೋ) ಕಂಪನಿ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಅದಕ್ಕಾಗಿ ಹೃತ್ಪೂರ್ವಕ ಧನ್ಯವಾದ ಅರ್ಪಿಸುವುದಾಗಿ ಕೇಂದ್ರ ರಾಸಾಯನ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.
ರಸಗೊಬ್ಬರ ಮಾರಾಟ ದರ ಇಳಿಕೆ.. ಇಫ್ಕೋಗೆ ಧನ್ಯವಾದ ತಿಳಿಸಿದ ಸಚಿವ ಡಿವಿಎಸ್
ರಸಗೊಬ್ಬರ ಮಾರಾಟ ದರದಲ್ಲಿ ಇಳಿಕೆ ಮಾಡಿದ್ದಕ್ಕಾಗಿ ಐಎಫ್‌ಎಫ್‌ಸಿಒ (ಇಫ್ಕೋ)ಗೆ ಕೇಂದ್ರ ರಸಾಯನ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಡಿವಿಎಸ್ ಇದರಿಂದ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.
IFFCO cuts Fertilisers rate : DVS Tweet
ಐಎಫ್‌ಎಫ್‌ಸಿಒ(ಇಫ್ಕೋ) ಕಂಪನಿಯು ಡಿಎಪಿ ಮತ್ತು ಎನ್ಪಿಕೆ ಗೊಬ್ಬರ ಮಾರಾಟ ದರವನ್ನು ಪ್ರತಿ ಟನ್‌ಗೆ 1000 ರೂ. ಮತ್ತು ಪ್ರತಿ ಬ್ಯಾಗ್‌ಗೆ 50 ರೂ. ಗಳನ್ನು ಇಳಿಕೆ ಮಾಡಿದೆ.ಇದು ಉತ್ತಮ ಬೆಳವಣಿಗೆ, ಇದರಿಂದ ದೇಶದ ರೈತ ಸಮೂಹಕ್ಕೆ ಅನುಲಕವಾಗಲಿದೆ ಎಂದು ಡಿವಿಎಸ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.