ಕರ್ನಾಟಕ

karnataka

ETV Bharat / state

ಸಿಎಂ ವಿಶ್ವಾಸಮತ ಯಾಚಿಸದಿದ್ದರೆ ಬಿಜೆಪಿ ಮುಂದಿವೆಯಂತೆ ಹಲವು ಮಾರ್ಗ - undefined

ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನಾಳೆ ವಿಶ್ವಾಸಮತ ಯಾಚನೆ ಮಾಡದೇ‌ ಇದ್ದಲ್ಲಿ ಬಿಜೆಪಿ ಮುಂದೆ ಹಲವು ಮಾರ್ಗಗಳಿದ್ದು, ಸಂವಿಧಾನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ವಿಶ್ವಾಸ ಮತ ಯಾಚಿಸದಿದ್ದರೆ ನಮ್ಮ ಮುಂದಿನ ಹಲವು ಮಾರ್ಗಗಳಿವೆ: ಡಿವಿ ಸದಾನಂದ ಗೌಡ

By

Published : Jul 21, 2019, 2:47 PM IST

ಬೆಂಗಳೂರು:ಮುಖ್ಯಮಂತ್ರಿ ಸದನದಲ್ಲಿ ವಿಶ್ವಾಸಮತ ಯಾಚಿಸಿ ಎಂದು ಕಳೆದ ಒಂದು ವಾರದಿಂದ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಒತ್ತಾಯಿಸುತ್ತಲೇ ಇದೆ. ಇದಕ್ಕಾಗಿ ಹಲವು ಕಸರತ್ತುಗಳನ್ನು ಸಹ ನಡೆಸಿದೆ. ಆದ್ರೆ ಇಲ್ಲಿವರೆಗೂ ಸಿಎಂ ಕುಮಾರಸ್ವಾಮಿ ಇದ್ಯಾವುದಕ್ಕೂ ಮಣಿದಿಲ್ಲ. ಅಂತಿಮವಾಗಿ ಸೋಮವಾರ ಮತ್ತೊಂದು ಮುಹೂರ್ತ ವಿಶ್ವಾಸಮತಕ್ಕೆ ಫಿಕ್ಸ್​ ಆಗಿದೆ.

ನಾಳೆಯೂ ವಿಶ್ವಾಸಮತ ಯಾಚನೆ ಮಾಡದೇ‌ ಇದ್ದಲ್ಲಿ ಬಿಜೆಪಿ ಮುಂದೆ ಹಲವು ಮಾರ್ಗಗಳಿದ್ದು, ಸಂವಿಧಾನಾತ್ಮಕವಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ವಿಶ್ವಾಸಮತ ಯಾಚಿಸದಿದ್ದರೆ ನಮ್ಮ ಮುಂದೆ ಹಲವು ಮಾರ್ಗಗಳಿವೆ: ಡಿ ವಿ ಸದಾನಂದಗೌಡ

ನಗರದ ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸದನದಲ್ಲಿ ಪ್ರಜಾತಂತ್ರಕ್ಕೆ ಗೌರವ ಕೊಟ್ಟು ನಡೆದುಕೊಳ್ಳುತ್ತಿದೆ. ಮೈತ್ರಿ ಪಕ್ಷಗಳಿಗೆ ಬಹುಮತ ಇಲ್ಲ. ಕಾಂಗ್ರೆಸ್ ಜೆಡಿಎಸ್ ಶಾಸಕರ ಸಂಖ್ಯೆ ನೂರಕ್ಕಿಂತ ಕೆಳಗೆ ಇಳಿಯುತ್ತದೆ. ನಮಗೆ ಬಹುಮತ ಇದೆ ಅಂತ ಜಗತ್ತಿಗೇ ಗೊತ್ತು ಅಧಿಕಾರಕ್ಕಾಗಿ ಕಾಗ್ರೆಸ್ ಮತ್ತು ಜೆಡಿಎಸ್​​ನವರು ಏನ್ ಬೇಕಾದರೂ ಮಾಡುತ್ತಾರೆ‌ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾಳೆ ಸುಪ್ರೀಂಕೋರ್ಟ್ ನ್ಯಾಯದ ಪರ ತೀರ್ಪು ಕೊಡುತ್ತದೆ ಎನ್ನುವ ವಿಶ್ವಾಸ ಇದೆ. ಬಿಜೆಪಿ ನ್ಯಾಯಬದ್ಧವಾಗಿ ನಡೆದುಕೊಂಡಿದೆ. ಈ ಎರಡು ದಿನದಲ್ಲಿ ಅವರ ಸಂಖ್ಯೆ ಇನ್ನಷ್ಟು ಕಮ್ಮಿ ಆಗಿದೆ ಎಂದು ಸದಾನಂದಗೌಡ ಹೇಳಿದ್ರು.

ಇನ್ನು ಮಧ್ಯಂತರ ಚುನಾಚಣೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬರುತ್ತದೆ. ಹಾಗಾಗಿ ಮಧ್ಯಂತರ ಚುನಾವಣೆಗೆ ನಮ್ಮ ವಿರೋಧ ಇದೆ ಎಂದು ಸದಾನಂದಗೌಡ ಸ್ಪಷ್ಟಪಡಿಸಿದರು.

For All Latest Updates

TAGGED:

ABOUT THE AUTHOR

...view details