ಬೆಂಗಳೂರು:ಐಎಂಎ ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಶಾಸಕ ರೋಷನ್ ಬೇಗ್ ಅವರನ್ನು ಎಸ್ಐಟಿ ಬಂಧಿಸಿದೆ, ಹಾಗೇ ಇಡಿಯಿಂದ ನೋಟಿಸ್ ಪಡೆದಿರುವ ಸಚಿವ ಜಮೀರ್ ಅಹ್ಮದ್ರನ್ನು ಬಂಧಿಸಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ಬಿಜೆಪಿ ಶಾಸಕರು ತಂಗಿದ್ದ ರಮಡ ರೆಸಾರ್ಟ್ಗೆ ಶಾಸಕ ಕೆ.ಎಸ್.ಈಶ್ವರಪ್ಪ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಕೈಗೊಂಬೆಯಾಗಿರುವ ಎಸ್ಐಟಿ ಸಮ್ಮಿಶ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ರೋಷನ್ ಬೇಗ್ ಅವರನ್ನು ಮಾತ್ರ ಬಂಧಿಸಿದೆ. ದೋಸ್ತಿ ಸರ್ಕಾರಕ್ಕೆ ಪ್ರಾಮಾಣಿಕತೆ, ನೈತಿಕತೆ ಇದ್ದರೆ ಸಚಿವ ಜಮೀರ್ ಅವರನ್ನು ಬಂಧಿಸಬೇಕಿತ್ತು ಎಂದು ಕಿಡಿಕಾರಿದರು.