ಬೆಂಗಳೂರು:ವಿಲ್ (ಉಯಿಲು) ಸತ್ಯವಾಗಿರುವಾಗ ವಿಲ್ದಾರರು ಮಕ್ಕಳಿಗೆ ಆಸ್ತಿಯನ್ನು ಸಮಾನ ಹಾಗೂ ನ್ಯಾಯಯುತವಾಗಿ ಹಂಚಿಕೆ ಮಾಡಲಾಗಿದಿಯೇ ಎಂಬುದನ್ನು ಪರಿಶೀಲನೆ ಮಾಡುವುದಕ್ಕೆ ನ್ಯಾಯಾಲಯ ಮಧ್ಯ ಪ್ರವೇಶ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ವಿಲ್ ಅನ್ನು ಹೊರತುಪಡಿಸಿ ಆಸ್ತಿಯನ್ನು ಸಮಾನ ಹಂಚಿಕೆ ಮಾಡಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಎಸ್. ಕೃಷ್ಣರಾವ್ ಅವರು (ಅವರ ಕಾನೂನು ವಾರಸುದಾರರು) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ. ಅಲ್ಲದೆ, ವಿಲ್ದಾರರ ಸಹಿ ನೈಜತೆ ಮತ್ತು ವಿಲ್ ಮಾಡಿಸಿದ ಸಂದರ್ಭದಲ್ಲಿ ಅವರು ಮಾನಸಿಕ ಸಾಮರ್ಥ್ಯ ಸರಿಯಾಗಿತ್ತೆ ಎಂಬುದನ್ನು ಮಾತ್ರ ಪರಿಶೀಲನೆಗೊಳಪಡಿಸಿಲಿದೆ. ಆದರೆ, ಸಂವಿಧಾನ ಪರಿಚ್ಛೇದ 14ರ ಪ್ರಕಾರ ಸಮಾನತೆ ಹಕ್ಕಿನ ಮಾದರಿಯಲ್ಲಿ ಆಸ್ತಿ ಹಂಚಿಕೆ ಆಗಿದಿಯೇ ಎಂದು ಪರಿಶೀಲನೆಗೊಳಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಸುಪ್ರೀಂಕೋರ್ಟ್ ಕವಿತಾ ಕನ್ವಾರ್ ಮತ್ತು ಪಮೆಲ ಮೆಹ್ತಾ ಮತ್ತಿತರರ ಪ್ರಕರಣ ಉಲ್ಲೇಖಿಸಿರುವ ನ್ಯಾಯಪೀಠ, ಈ ಪ್ರಕರಣದಲ್ಲಿ ವಿಲ್ದಾರರ ಸಹಿಯನ್ನು ಪರೀಕ್ಷೆ ಮಾಡಬಹುದು ಇಲ್ಲವೇ ವಿಲ್ ಮಾಡಿರುವವರು ಮಾನಸಿಕ ಸ್ಥಿಮಿತತೆಯನ್ನು ಸರಿಯಾಗಿತ್ತೇ ಎಂಬುದನ್ನು ಪರೀಕ್ಷೆಗೆ ಒಳಪಡಿಸಬಹುದಾಗಿದೆ. ಆದರೆ, ಆಸ್ತಿ ಹಂಚಿಕೆ ಮಾಡುವ ಹಕ್ಕು ವಿಲ್ದಾರರಿಗೆ ಇರಲಿದೆ. ಯಾರಿಗೆ ಎಷ್ಟು ಭಾಗ ಆಸ್ತಿ ನೀಡಬೇಕು ಎಂದು ವಿಲ್ದಾರರು ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಜತೆಗೆ, ಈ ಸಂಬಂಧ ಸೂಚನೆ ನೀಡಲು ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ಆದೇಶಿಸಿದೆ.