ಕರ್ನಾಟಕ

karnataka

ETV Bharat / state

ಸರ್ಕಾರ ಒಪ್ಪಿದರೆ ಜಾತಿ ಜನಗಣತಿಗೆ ತಾರ್ಕಿಕ ಅಂತ್ಯ ಸಿಗಲಿದೆ: ಸಿದ್ದರಾಮಯ್ಯ

ಜಾತಿ ಗಣತಿಯ ತಾರ್ಕಿಕ ಅಂತ್ಯ ಅಂದರೆ ಸರ್ಕಾರಕ್ಕೆ ವರದಿ ಸಲ್ಲಿಸೋದು ಅದಕ್ಕೆ ಒಪ್ಪಿಗೆ ಸೂಚಿಸುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

banglore
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

By

Published : Nov 26, 2020, 2:46 PM IST

Updated : Nov 26, 2020, 3:38 PM IST

ಬೆಂಗಳೂರು: ಜಾತಿ ಗಣತಿಯ ತಾರ್ಕಿಕ ಅಂತ್ಯ ಎಂದರೆ ಸರ್ಕಾರಕ್ಕೆ ವರದಿ ಸಲ್ಲಿಸೋದು ಅದಕ್ಕೆ ಒಪ್ಪಿಗೆ ಸೂಚಿಸುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ವರದಿಯಲ್ಲಿ ಏನಿದೆಯೋ ಗೊತ್ತಿಲ್ಲ. ಸರ್ಕಾರ ವರದಿ ತಗೆದುಕೊಳ್ಳೋಕೆ ರೆಡಿ ಇಲ್ಲ. ಸ್ವಾತಂತ್ರ್ಯ ಬಂದು 74 - 75 ವರ್ಷ ಆಗಿದೆ, ಯಾವ್ಯಾವ ಜಾತಿ ಆರ್ಥಿಕವಾಗಿ ಸಬಲವಾಗಿದೆ ಅನ್ನೋ ಮಾಹಿತಿ ಇಲ್ಲ. ಬಿಜೆಪಿಯವರು ಗಣತಿ ಸರಿ ಇಲ್ಲ ಅಂತಾರೆ. ಒಲ್ಲದ ಗಂಡಂಗೆ ಮೊಸರಲ್ಲಿ ಕಲ್ಲು ಅನ್ನುವ ತರಹ ಆಡ್ತಿದಾರೆ. ಗಣತಿ ಆತುರವಾಗಿ ಮಾಡಿಲ್ಲ ಸಮಯ ತಗೆದುಕೊಂಡು ಮಾಡಿದ್ದೇವೆ ಎಂದು ವಿವರಿಸಿದರು.

ನನಗಿರುವ ಮಾಹಿತಿ ಆಧಾರವಾಗಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂದಿದೆ. ಎರಡು ವರ್ಷ ಅವರೇ ಉಳಿದುಕೊಳ್ಳುತ್ತೀನಿ ಅನ್ನೋದಾದರೆ ಉಳಿದುಕೊಳ್ಳಲಿ ನಮಗೇನು. ಏನು ಕೆಲಸ ಮಾಡದಿರೋ ಮುಖ್ಯಮಂತ್ರಿ ಅಲ್ವಾ. ಇವರು ಹೋಗಿ ಕೆಲಸ ಮಾಡಿ ಬರಲಿ ಅಂತ ಕಾಂಗ್ರೆಸ್​ನಲ್ಲೇ ಒಡಕಿದೆ ಅಂದಿದಾರೆ. ರಮೇಶ್ ಜಾರಕಿಹೋಳಿ ಮನೆಯಲ್ಲಿ ಒಂದು ಕಡೆ, ಇವರ ಮನೆಯಲ್ಲಿ ಒಂದು ಕಡೆ ಮೀಟಿಂಗ್ ಮಾಡ್ತಾರಲ್ಲ ಏನೆನ್ನುವುದು ಅದನ್ನು ಬಹಳ ಗಟ್ಟಿ ಮಡಿಕೆ ಅನ್ನೋದಾ ಎಂದರು.

ಈಶ್ವರಪ್ಪ ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವ ಮನವಿ ಮಾಡಲು ದೆಹಲಿ ಹೋಗಿದ್ದಾರೆ. ಒಳ್ಳೆಯದು ಹೋಗಿ ಬರಲಿ ಎಂದ ಅವರು ಸಿಎಂ ಮಂತ್ರಿ ಮಂಡಲ ಮಾಡ್ತಾರೋ ಮಂತ್ರಿ ಮಂಡಲ ಕೆಡವಿಕೊಳ್ತಾರೋ ಗೊತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇಲ್ಲ. ಸರ್ಕಾರ ಸಂಪೂರ್ಣ ಸತ್ತು ಹೋಗಿದೆ. ಅದರ ಕಡೆ ಗಮನ ಕೊಡುವುದು ಬಿಟ್ಟು ಚೇರ್​ಮನ್​ಗಳನ್ನು ಮಾಡಿಕೊಂಡು ಕೂತರೆ ಏನು ಪ್ರಯೋಜನ ಎಂದರು.

Last Updated : Nov 26, 2020, 3:38 PM IST

ABOUT THE AUTHOR

...view details