ಕರ್ನಾಟಕ

karnataka

ETV Bharat / state

ಕಸ ವಿಂಗಡಣೆ ಮಾಡದಿದ್ದರೆ ದುಪ್ಪಟ್ಟು ದಂಡ: ಬಿಬಿಎಂಪಿ ಮೇಯರ್​​​ - ಕಸ ವಿಂಗಡಣೆ

ಘನತ್ಯಾಜ್ಯ ನಿರ್ವಹಣಾ ನಿಯಮದಂತೆ ಕಡ್ಡಾಯವಾಗಿ ಕಸ ವಿಂಗಡಣೆ ಮಾಡಬೇಕು. ಇಲ್ಲವಾದರೆ ದುಪ್ಪಟ್ಟು ದಂಡ ತೆರಬೇಕಾಗುತ್ತದೆ ಎಂದು ಮಹಾಪೌರರು ತಿಳಿಸಿದರು.

ಘನತ್ಯಾಜ್ಯ ನಿರ್ವಹಣಾ ನಿಯಮ

By

Published : Aug 21, 2019, 8:10 AM IST

ಬೆಂಗಳೂರು: ಘನತ್ಯಾಜ್ಯ ನಿರ್ವಹಣಾ ನಿಯಮದಂತೆ ಕಡ್ಡಾಯವಾಗಿ ಕಸ ವಿಂಗಡಣೆ ಮಾಡಬೇಕು. ಇಲ್ಲವಾದರೆ ದುಪ್ಪಟ್ಟು ದಂಡ ತೆರಬೇಕಾಗುತ್ತದೆ ಎಂದು ಬಿಬಿಎಂಪಿ ಮೇಯರ್​​ ಗಂಗಾಂಬಿಕೆ ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಹಾಪೌರರು, ಘನತ್ಯಾಜ್ಯ ನಿರ್ವಹಣೆ ನಿಯಮ-2016 ಅನುಸಾರ ಏನೆಲ್ಲಾ ನಿಯಮಗಳಿವೆ ಅವನ್ನೆಲ್ಲಾ ಚಾಚು ತಪ್ಪದೆ ಪಾಲನೆ ಮಾಡಬೇಕು. ಮುಂದಿನ ದಿನಗಳಲ್ಲಿ ಹೊಸ ಟೆಂಡರ್ ಜಾರಿಯಾಗಲಿದ್ದು, ಎಲ್ಲರೂ ಹಸಿ, ಒಣ, ಸ್ಯಾನಿಟರಿ ಹಾಗೂ ಇ-ತ್ಯಾಜ್ಯವನ್ನು ಕಡ್ಡಾಯವಾಗಿ ವಿಂಗಡೆಣೆ ಮಾಡಿಕೊಡಬೇಕು. ವಿಂಗಡಿಸಿ ಕೊಡದೇ ಇರುವವರಿಗೆ ಪಾಲಿಕೆಗೆ ದಂಡ ವಿಧಿಸಲಿದೆ ಎಂದರು.

ಎನ್.ಜಿ.ಟಿ. ಘನತ್ಯಾಜ್ಯ ನಿರ್ವಹಣೆ ನಿಯಮ ಅನುಸಾರ ಮನೆಯಲ್ಲೇ ಕಸ ವಿಂಗಡಣೆ ಆಗಬೇಕು. ನಿಯಮ ಜಾರಿಯಾಗಿ ಮೂರು ವರ್ಷಗಳು ಕಳೆಯುತ್ತಿದ್ದರೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಈ ಬಗ್ಗೆ ಪಾಲಿಕೆ ಸೂಕ್ತ ಕ್ರಮ ವಹಿಸಬೇಕು. ಜೊತೆಗೆ ಸಾರ್ವಜನಿಕರು, ಎನ್.ಜಿ.ಒ, ಕಾರ್ಖಾನೆಗಳು ಇದರಲ್ಲಿ ಕೈಜೋಡಿಸಬೇಕು. ಆಗ ಮಾತ್ರ ಕಸವನ್ನು ವಿಂಗಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಮನೆ-ಮನೆ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಹಸಿ, ಒಣ ಹಾಗೂ ಸ್ಯಾನಿಟರಿ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ಕೊಡದಿದ್ದರೆ ದುಪ್ಪಟ್ಟು ದಂಡ ವಿಧಿಸಬೇಕು. ಅದೇ ರೀತಿ ದಾಸರಹಳ್ಳಿ ವಲಯ 27 ಚದುರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, 8 ವಾರ್ಡ್​ಗಳು ಬರಲಿವೆ. ಈ ವಲಯದಲ್ಲಿ 150 ಟನ್ ತ್ಯಾಜ್ಯ ಉತ್ಪತ್ತಿ ಆಗುತ್ತಿದೆ. ಬಹುತೇಕ ತ್ಯಾಜ್ಯವನ್ನು ಕ್ವಾರಿಗೆ ವಿಲೇವಾರಿ ಮಾಡಲಾಗುತ್ತಿದ್ದು, ಈ ಪೈಕಿ ಎರಡೂ ವಲಯಗಳ ವ್ಯಾಪ್ತಿಯಲ್ಲಿ‌ ಬರುವ ವಾರ್ಡ್​ಗಳಲ್ಲಿಯೇ ಹಸಿ ತ್ಯಾಜ್ಯ ಸಂಸ್ಕರಿಸಿ, ಒಣ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ ಕೊಡಲು ಸಹಕರಿಸಬೇಕು ಎಂದರು.

ABOUT THE AUTHOR

...view details