ಕರ್ನಾಟಕ

karnataka

ETV Bharat / state

ಜೂನ್ ಒಳಗೆ ಮನೆ ನೀಡದಿದ್ರೆ, ನಾನು ರಾಜಕೀಯ ಬಿಡುತ್ತೇನೆ : ಸಚಿವ ಸೋಮಣ್ಣ ಸವಾಲ್​ - Minister Somanna news

43 ಸಾವಿರ ಮನೆ ಪ್ರಾರಂಭ ಮಾಡಿದ್ದೇವೆ. 331 ಎಕರೆ ಜಾಗ ಸಿಕ್ಕಿದೆ. ಅದರಲ್ಲಿ ಕೆಲಸ ನಡೆಯುತ್ತಿದೆ. 229 ಎಕರೆ ಜಾಗ ಮಂಜೂರು ಸಹ ಆಗಿದೆ. ಒಟ್ಟು 900 ಎಕರೆ ಜಾಗ ಸಿಗುತ್ತದೆ. ಇದರಿಂದ ಒಂದು ಲಕ್ಷ ಮನೆ ನಿರ್ಮಾಣ ಮಾಡುವುದಕ್ಕೆ ಅನುಕೂಲ ಆಗುತ್ತದೆ. ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ 43 ಸಾವಿರ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ..

ಸಚಿವ ವಿ. ಸೋಮಣ್ಣ
ಸಚಿವ ವಿ. ಸೋಮಣ್ಣ

By

Published : Sep 9, 2020, 7:00 PM IST

Updated : Sep 9, 2020, 7:32 PM IST

ಬೆಂಗಳೂರು :ಮುಂದಿನ ವರ್ಷ ಜೂನ್ ಒಳಗೆ 25 ಸಾವಿರ ಮನೆ ಮಂಜೂರು ಮಾಡುತ್ತೇವೆ. ನಾನು ಈ ಕೆಲಸ ಮಾಡೇ ತೀರುತ್ತೇನೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಿಗಮಕ್ಕೆ ಸರ್ಕಾರಿ ಜಮೀನು ಮಂಜೂರಾತಿ ಮತ್ತು ಜಮೀನು ಹಸ್ತಾಂತರ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಇಂದು ವಿಕಾಸಸೌಧದಲ್ಲಿ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2021ರ ಜೂನ್ ಒಳಗೆ 25 ಸಾವಿರ ಮನೆ ಕೊಟ್ಟೆ ಕೊಡುತ್ತೇವೆ ಎಂದರು.

ವಸತಿ ಸಚಿವ ವಿ. ಸೋಮಣ್ಣ

ಜೂನ್‌ನೊಳಗೆ ಮನೆ ನೀಡದಿದ್ರೆ ನಾನು ರಾಜಕಾರಣ ಬಿಟ್ಟು ಹೋಗುತ್ತೇನೆ. ಮಂತ್ರಿ ಸ್ಥಾನ ಅಲ್ಲ, ನಾನು ರಾಜಕಾರಣ ಬಿಟ್ಟು ಹೋಗುತ್ತೇನೆ. ಇದು ನನ್ನ ಸವಾಲು ಎಂದರು. 2006ರಿಂದ ಈವರೆಗೂ ಒಂದೇ ಒಂದು ಮನೆ ಕೊಟ್ಟಿಲ್ಲ. ಈ ಬಗ್ಗೆ ನನ್ನ ಮನಸ್ಸಿಗೆ ತುಂಬಾ ನೋವಿದೆ. ಈ ವಿಚಾರವನ್ನು ನಾನು ಗಂಭೀರವಾಗಿ ತೆಗದುಕೊಂಡಿದ್ದೇನೆ ಎಂದರು.

43 ಸಾವಿರ ಮನೆ ಪ್ರಾರಂಭ ಮಾಡಿದ್ದೇವೆ. 331 ಎಕರೆ ಜಾಗ ಸಿಕ್ಕಿದೆ. ಅದರಲ್ಲಿ ಕೆಲಸ ನಡೆಯುತ್ತಿದೆ. 229 ಎಕರೆ ಜಾಗ ಮಂಜೂರು ಸಹ ಆಗಿದೆ. ಒಟ್ಟು 900 ಎಕರೆ ಜಾಗ ಸಿಗುತ್ತದೆ. ಇದರಿಂದ ಒಂದು ಲಕ್ಷ ಮನೆ ನಿರ್ಮಾಣ ಮಾಡುವುದಕ್ಕೆ ಅನುಕೂಲ ಆಗುತ್ತದೆ. ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ 43 ಸಾವಿರ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಇದರಲ್ಲಿ 25 ರಿಂದ 30 ಸಾವಿರ ಮನೆಗಳನ್ನು ಬಡವರಿಗೆ ಸದ್ಯದಲ್ಲೇ ನೀಡುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ. ಬಡವರಿಗೆ, ಗುಡಿಸಲಿನಲ್ಲಿ ಇರುವವರಿಗೆ ಮನೆ ಸಿಗುವಂತೆ ಆಗಬೇಕು. ಕಂದಾಯ ಇಲಾಖೆ ಸಚಿವರ ಜೊತೆಗೆ ಕೂಡ ಮಾತುಕತೆ ನಡೆಸುತ್ತಿದ್ದೇನೆ ಎಂದರು.

Last Updated : Sep 9, 2020, 7:32 PM IST

ABOUT THE AUTHOR

...view details