ಬೆಂಗಳೂರು:ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಪ್ರಾಣ ಬೆದರಿಕೆ ಇದ್ದರೆ ದೂರು ನೀಡಲಿ. ಯಾರ ಮೇಲಾದರೂ ಸಂಶಯ ಇದ್ದರೆ ಮಾಹಿತಿ ನೀಡಲಿ ಆಗ ಗೃಹ ಇಲಾಖೆ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹೆಚ್‌ಡಿಕೆಗೆ ಜೀವ ಬೆದರಿಕೆ ಇದ್ರೆ ದೂರು ಕೊಡಲಿ, ರಕ್ಷಣೆ ಕೊಡ್ತೇವೆ: ಜಗದೀಶ್ ಶೆಟ್ಟರ್ - jagadish shettar latest news
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಪ್ರಾಣ ಬೆದರಿಕೆ ಇದ್ದರೆ ದೂರು ನೀಡಲಿ ಆಗ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ. ಅದನ್ನು ಬಿಟ್ಟು ಇಲ್ಲಸಲ್ಲದ ಹೇಳಿಕೆ ಕೊಡಬಾರದೆಂದು ಸಚಿವ ಜಗದೀಶ್ ಶೆಟ್ಟರ್ ಟಾಂಗ್ ನೀಡಿದರು.
ಹೆಚ್ಡಿಕೆಗೆ ಜೀವ ಬೆದರಿಕೆ ಇದ್ದರೆ ದೂರು ಕೊಡಲಿ, ಪರಿಹರಿಸೋಣ: ಜಗದೀಶ್ ಶೆಟ್ಟರ್ ಟಾಂಗ್!
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಮಾಜಿ ಸಿಎಂ ಕುಮಾರಸ್ವಾಮಿಗೆ ಜೀವ ಬೆದರಿಕೆ ಇರುವ ಟ್ವೀಟ್ ಮಾಡಿದ್ದಾರೆ. ಆದರೆ, ಗೃಹ ಇಲಾಖೆ ಇದೆ. ಸರ್ಕಾರ ಇದೆ, ಕುಮಾರಸ್ವಾಮಿ ದೂರು ಕೊಡಲಿ, ಆಗ ತನಿಖೆ ಮಾಡಿಸೋಣ. ಅದನ್ನು ಬಿಟ್ಟು ಈ ರೀತಿಯಲ್ಲಿ ಹೇಳಿಕೆ ಕೊಡಬಾರದು ಎಂದು ಶೆಟ್ಟರ್ ಟಾಂಗ್ ನೀಡಿದರು.
Last Updated : Jan 25, 2020, 5:34 PM IST