ಕರ್ನಾಟಕ

karnataka

ETV Bharat / state

ಸೈಬರ್ ಕ್ರೈಂ ಆಗಿದ್ರೆ ಇನ್ಮುಂದೆ ಸೈಬರ್ ಠಾಣೆಗೆ ಹೋಗ್ಬೇಕಾಗಿಲ್ಲ..

ಸೈಬರ್ ಠಾಣೆಯಲ್ಲಿ ಇತ್ತೀಚೆಗೆ ಸೈಬರ್ ಪ್ರಕರಣಗಳು ಜಾಸ್ತಿ ದಾಖಲಾಗ್ತಿವೆ. ಹೀಗಾಗಿ ಸರ್ಕಾರ ಇನ್ಮುಂದೆ ಸೈಬರ್ ಟೆಕ್ನಿಕಲ್‌ನಂತಹ ಪ್ರಕರಣಗಳನ್ನ ಸ್ಥಳೀಯ ಠಾಣೆಯಲ್ಲಿ ದಾಖಲಿಸಿ ತನಿಖೆ ನಡೆಸಬಹುದೆಂದು ಆದೇಶ ಹೊರಡಿಸಿದೆ.

ನಗರ ಪೊಲೀಸ್ ಕಮಿಷನರ್ ಕಚೇರಿ

By

Published : Nov 19, 2019, 9:38 PM IST

ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಪ್ರತಿ ದಿನ ನಗರ ಪೊಲೀಸ್ ಕಮಿಷನರ್ ಕಚೇರಿ ವ್ಯಾಪ್ತಿಯಲ್ಲಿರುವ ಸೈಬರ್ ಠಾಣೆಯಲ್ಲಿ ಸೈಬರ್ ಪ್ರಕರಣಗಳು ಜಾಸ್ತಿ ದಾಖಲಾಗ್ತಿವೆ.

ಈ ಹಿನ್ನೆಲೆ ಸೈಬರ್ ಠಾಣೆಯಲ್ಲಿ ದೂರುಗಳ ಸುರಿ ಮಳೆ ಬರುತಿತ್ತು. ಈ ವರ್ಷ ಈವರೆಗೆ 9 ಸಾವಿರಕ್ಕೂ ಹೆಚ್ಚು ಎಫ್​​ಐಆರ್ ದಾಖಲಾಗಿವೆ. ಸದ್ಯ ಸೈಬರ್ ಪೊಲೀಸರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಯಾಕಂದ್ರೆ, ಸರ್ಕಾರ ಇನ್ಮುಂದೆ ಸೈಬರ್ ಟೆಕ್ನಿಕಲ್‌ನಂತಹ ಪ್ರಕರಣಗಳನ್ನ ಸ್ಥಳೀಯ ಠಾಣೆಯಲ್ಲಿ ದಾಖಲಿಸಿ, ತನಿಖೆ ನಡೆಸಬಹುದೆಂದು ಆದೇಶ ಹೊರಡಿಸಿದೆ.

ಈತನಕ ಸ್ಥಳೀಯ ಪೊಲೀಸರು ಬ್ಯಾಂಕ್​ನಿಂದ ಹಣ ಕಳ್ಳತನ, ಎಟಿಎಂ ಸ್ಕ್ಯಾಮ್, ಮೋಸ, ಅಶ್ಲೀಲ ಅಥವಾ ಕಾನೂನು ಬಾಹಿರ, ಸೈಬರ್ ಭಯೋತ್ಪಾದನೆ, ಡೇಟಾ ಡಿಡ್ಲಿಂಗ್, ವೈರಸ್ ಅಟ್ಯಾಕ್, ಇಮೇಲ್ ಹ್ಯಾಕ್ ಪ್ರಕರಣಗಳು ಬಂದಾಗ ನಮಗೆ ಈ ಪ್ರಕರಣ ಬರಲ್ಲ ಎನ್ನುತ್ತಿದ್ದರು. ಆದರೆ, ಇನ್ಮುಂದೆ ಹಾಗೇ ಹೇಳುವ ಹಾಗಿಲ್ಲ. ಯಾಕಂದ್ರೆ, ಪೊಲೀಸರು ಕೂಡ ಸೈಬರ್ ಕ್ರೈಂನಂತೆ ತನಿಖೆ ನಡೆಸಬೇಕೆಂದು ಸದ್ಯ ಆದೇಶ ಹೊರಡಿಸಲಾಗಿದೆ.

ABOUT THE AUTHOR

...view details