ಬೆಂಗಳೂರು: ನಗರದ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಸಲುವಾಗಿ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಸಲಹೆ-ಸೂಚನೆಗಳನ್ನು ನೀಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಿಮ್ಮ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆ ಇದ್ರೆ ಸೂಕ್ತ ಸಲಹೆ ಕೊಡಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ - Police commissioner tweet
ನಿಮ್ಮ ಏರಿಯಾದಲ್ಲಿ ಟ್ರಾಫಿಕ್ ತೊಂದರೆಗಳನ್ನು ಅನುಭವಿಸುತ್ತಿದ್ದೀರಾ... ಹಾಗಿದ್ರೆ ಏನು ಆ ಸಮಸ್ಯೆ ಎಂದು ತಿಳಿಸಿ, ಸಲಹೆ ಸೂಚನೆಗಳನ್ನು ನೀಡಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿನಂತಿಸಿಕೊಂಡಿದ್ದಾರೆ.
ಸಂಚಾರ ವ್ಯವಸ್ಥೆ ಸುಧಾರಣೆಗಳ ಬೇಡಿಕೆ ಬಗ್ಗೆ ಪ್ರಸ್ತಾಪಿಸುವುದು ನಾಗರಿಕರ ಆದ್ಯ ಕರ್ತವ್ಯ. ನಿಮ್ಮ ನಿಮ್ಮ ಏರಿಯಾಗಳಲ್ಲಿ ಟ್ರಾಫಿಕ್ ಸಮಸ್ಯೆ ಅನುಭವಿಸುತ್ತಿದ್ದರೆ ದಯವಿಟ್ಟು ನಿಮ್ಮ ಸಮೀಪವಿರುವ ಜಂಕ್ಷನ್ ಅಥವಾ ಸಿಗ್ನಲ್ಗಳಲ್ಲಿ ತೆರಳಿ ಅಲ್ಲಿ ಎದುರಾಗುವ ತೊಂದರೆಗಳ ಬಗ್ಗೆ ತಿಳಿಸುವಂತೆ ಆಯುಕ್ತರು ಟ್ವಿಟರ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಆದ್ಯತೆ ಮೇರೆಗೆ ಸೂಕ್ತ ಸಲಹೆಗಳನ್ನು ಸ್ವೀಕರಿಸಿ ಅನುಷ್ಠಾನಗೊಳಿಸುತ್ತೇವೆ ಎಂದಿದ್ದಾರೆ.
ಇನ್ನು ಆಯುಕ್ತರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ನಾಗರಿಕರು, ಮೊದಲು ನಗರದಲ್ಲಿ ಸಿಗ್ನಲ್ಗಳಲ್ಲಿ ಟೈಮರ್ ಹಾಕುವಂತೆ ತಿಳಿಸಿದರೆ, ಮತ್ತೊಬ್ಬರು ಭಾರಿ ವಾಹನಗಳಿಗೆ ರಸ್ತೆಯ ಬಲ ಬದಿಯಲ್ಲಿ ಬರುವ ಹಾಗೆ ಟ್ರಾಫಿಕ್ ಲೈನ್ ಬರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಸಾರ್ವಜನಿಕರೊಂದಿಗೆ ಟ್ರಾಫಿಕ್ ಪೊಲೀಸರು ಸಂಯಮದಿಂದ ವರ್ತಿಸಲಿ ಎಂದು ಆಗ್ರಹಿಸಿದ್ದಾರೆ.