ಬೆಂಗಳೂರು:ಲೇಖಕ, ಹಿರಿಯ ಪತ್ರಕರ್ತ ಆರ್.ವಿ.ವಿಠ್ಠಲ್ ಮೂರ್ತಿ ಬರೆದಿರುವ "ಇದೊಂಥರಾ ಆತ್ಮಕಥೆ" ಕೃತಿಯನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು.
'ಇದೊಂಥರಾ ಆತ್ಮಕಥೆ' ಕೃತಿ ಬಿಡುಗಡೆಗೊಳಿಸಿದ ಮಾಜಿ ಸಿಎಂ ಹೆಚ್ಡಿಕೆ - ಬಹುರೂಪಿ ಪ್ರಕಾಶನದ ಇದೊಂಥರಾ ಆತ್ಮಕಥೆ ಕೃತಿ
ಲೇಖಕ, ಹಿರಿಯ ಪತ್ರಕರ್ತ ಆರ್.ವಿ.ವಿಠ್ಠಲ್ ಮೂರ್ತಿ ಬರೆದಿರುವ 'ಇದೊಂಥರಾ ಆತ್ಮಕಥೆ' ಕೃತಿ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆಯಿತು.
ಪ್ರೆಸ್ ಕ್ಲಬ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುರೂಪಿ ಪ್ರಕಾಶನದ ಜಿ.ಎನ್.ಮೋಹನ್ ಹಾಗೂ ಹಿರಿಯ ಪತ್ರಕರ್ತೆ ಡಾ. ವಿಜಯ ಉಪಸ್ಥಿತರಿದ್ದರು. ಬಹುರೂಪಿ ಪ್ರಕಾಶನದಿಂದ ಹೊರತಂದಿರುವ ಈ ಪುಸ್ತಕದಲ್ಲಿ ವಿಠ್ಠಲ್ ಮೂರ್ತಿಯವರು, ಅನೇಕ ರಾಜಕಾರಣಿಗಳೊಂದಿಗಿನ ಒಡನಾಟ ಹಾಗೂ ಅವರ ವ್ಯಕ್ತಿತ್ವವನ್ನು ಉಲ್ಲೇಖಿಸಿದ್ದಾರೆ.
ಸುಮಾರು 3 ದಶಕಗಳಿಗೂ ಹೆಚ್ಚು ಕಾಲ ವರದಿಗಾರಿಕೆ ಮಾಡಿರುವ ಅವರು, ಮಾಜಿ ಸಿಎಂಗಳಾದ ಜೆ.ಹೆಚ್.ಪಟೇಲ್, ರಾಮಕೃಷ್ಣ ಹೆಗಡೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಇನ್ನಿತರ ಮುಖ್ಯಮಂತ್ರಿಗಳು ಹಾಗೂ ಹಿರಿಯ ರಾಜಕಾರಣಿಗಳನ್ನು ಹತ್ತಿರದಿಂದ ಬಲ್ಲವರು. ಹಳೆಯ ರಾಜಕಾರಣಿಗಳ ಸೃಜನಶೀಲತೆ, ಸಜ್ಜನಿಕೆಯನ್ನು ವಿಸ್ತೃತವಾಗಿ ಇದೊಂಥರಾ ಆತ್ಮಕತೆಯಲ್ಲಿ ವಿವರಿಸಿದ್ದಾರೆ.