ಬೆಂಗಳೂರು:ನಗರದಲ್ಲಿ ಕೋವಿಡ್ನಿಂದ ಆಸ್ಪತ್ರೆಗಳ ತೀವ್ರ ನಿಗಾ ಘಟಕಕ್ಕೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ತಿಂಗಳ ಆರಂಭದ ದಿನಗಳಲ್ಲಿ ತೀವ್ರ ನಿಗಾ ಘಟಕ (ಐಸಿಯು)ಕ್ಕೆ ದಾಖಲಾದವರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.
ನವೆಂಬರ್, ಡಿಸೆಂಬರ್ನಲ್ಲಿ ಇನ್ನಷ್ಟು ಜನರನ್ನು ಕೊರೊನಾ ಬಾಧಿಸುವ ಆತಂಕ ಎದುರಾಗಿದೆ. ಅಸ್ತಮಾ, ಉಸಿರಾಟದ ಸಮಸ್ಯೆ ಇರುವವರಿಗೆ ಕೊರೊನಾ ಬಾಧಿಸಿದರೆ, ಐಸಿಯು ಸೇರಿದಂತೆ ಬೆಡ್ ಸಮಸ್ಯೆ ಕೂಡ ಶುರುವಾಗಲಿದೆ.
ಐಸಿಯುಗೆ ದಾಖಲಾಗುತ್ತಿರುವವರ ಸಂಖ್ಯೆ:
1.ಅಕ್ಟೋಬರ್ 1- 268 ಮಂದಿ.
2.ಅಕ್ಟೋಬರ್ 2- 285 ಮಂದಿ.
3.ಅಕ್ಟೋಬರ್ 3- 291 ಮಂದಿ.
4.ಅಕ್ಟೋಬರ್ 4- 293 ಮಂದಿ.