ಬೆಂಗಳೂರು:ದೇಶದಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿದ್ದು, ಸೋಂಕು ಹರಡುವಿಕೆಯನ್ನ ನಿಯಂತ್ರಿಸಲು ಟೆಸ್ಟಿಂಗ್ ಅಗತ್ಯ. ಆದರೆ ಸಿಕ್ಕ ಸಿಕ್ಕವರಿಗೆಲ್ಲ ಟೆಸ್ಟಿಂಗ್ ಅಗತ್ಯ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ತಿಳಿಸಿದೆ.
ಕೋವಿಡ್ ಟೆಸ್ಟಿಂಗ್ ವಿಧಾನ ಬದಲಿಸುವಂತೆ ಐಸಿಎಂಆರ್ ಸಲಹೆ ನೀಡಿದ್ದು, ಯಾರಿಗೆ ಕೋವಿಡ್ ಟೆಸ್ಟ್ ಬೇಕು, ಬೇಡ ಎಂಬುದರ ಬಗ್ಗೆ ರಾಜ್ಯಗಳಿಗೆ ಸೂಚನೆ ನೀಡಿದೆ. ಬದಲಾದ ಕೊರೊನಾ ಸನ್ನಿವೇಶಕ್ಕೆ ತಕ್ಕಂತೆ ಟೆಸ್ಟಿಂಗ್ ಪ್ಲಾನ್ ಬದಲಾಯಿಸುವಂತೆ ಸಲಹೆ ನೀಡಲಾಗಿದೆ.
ಕೋವಿಡ್ ಟೆಸ್ಟಿಂಗ್ ಗೆ ಐಸಿಎಂಆರ್ ಸಲಹೆಗಳು ಏನು?
1.ಯಾರಿಗೆ ಕೋವಿಡ್ ಟೆಸ್ಟ್ ಮಾಡಬೇಕು ?
- ಯಾರಿಗೆ ರೋಗ ಲಕ್ಷಣಗಳು ಇರುತ್ತವೆಯೋ ಅಂತವರನ್ನ ಕೋವಿಡ್ ಟೆಸ್ಟ್ಗೆ ಒಳಪಡಿಸಿ.
- ಸೋಂಕು ದೃಢಪಟ್ಟ ಸೋಂಕಿತನ ಪ್ರಾಥಮಿಕ ಸಂಪರ್ಕರದಲ್ಲಿರುವ, ಹೈ-ರಿಸ್ಕ್ ವ್ಯಕ್ತಿಗಳನ್ನ ಟೆಸ್ಟ್ಗೆ ಒಳಪಡಿಸಬೇಕು.
- ಅಂದರೆ 60 ವರ್ಷ ಮೇಲ್ಪಟ್ಟವರ ಟೆಸ್ಟಿಂಗ್ ಮಾಡುವುದು, ಇತರ ಆರೋಗ್ಯ ಸಮಸ್ಯೆ ಇದ್ದವರಿಗೆ ಟೆಸ್ಟ್ ಮಾಡುವುದು.
- ಅಂತಾರಾಷ್ಟ್ರೀಯ ಪ್ರಯಾಣಿಕರನ್ನ ಟೆಸ್ಟ್ ಮಾಡುವುದು.